ಮೈಸೂರು

ಪುತಿನ ಕವಿ ಕಾವ್ಯ ನಮನ ನಾಳೆ

ಮೈಸೂರು,ಜು.17 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿಜಯ ವಿಠಲ ಪದವಿಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಿರಿಯ ಕವಿ ಪು.ತಿ.ನ –ಕವಿ ಕಾವ್ಯ ನಮನ ಹಾಗೂ ಎ.ಅನಂತ ಅಯ್ಯಂಗಾರ್ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜು.18ರ ಬೆಳಗ್ಗೆ 10.30ಕ್ಕೆ ಕಾಲೇಜು ಸಭಾಂಗಣದಲ್ಲಿ ವಿಜಯ ವಿಠಲ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಆರ್.ವಾಸುದೇವ ಭಟ್ ಉದ್ಘಾಟಿಸುವರು. ಪ್ರೊ.ಮೊರಬದ ಮಲ್ಲಿಕಾರ್ಜುನ ವಿಚಾರ ಮಂಡಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು, ಕವಿಯತ್ರಿ ಡಾ.ಎ.ಪುಷ್ಪಾ ಅಯ್ಯಂಗಾರ್, ಪ್ರಾಂಶುಪಾಲರಾದ ಹೆಚ್.ಸತ್ಯಪ್ರಸಾದ್ ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: