
ಮೈಸೂರು
ಕುವೆಂಪು ವ್ಯಕ್ತಿತ್ವ : ವಿಚಾರ ಸಂಕಿರಣ.19.
ಮೈಸೂರು,ಜು.17 : ಮೈವಿವಿಯ ಕುವೆಂಪು ಕಾವ್ಯಾಧ್ಯಯನ ಪೀಠದಿಂದ ‘ಕುವೆಂಪು ವ್ಯಕ್ತಿತ್ವ : ವಿಚಾರ ಸಂಕಿರಣವನ್ನು’ ಜು.19ರ ಬೆಳಗ್ಗೆ 10.30ಕ್ಕೆ ಬಿ.ಎಂ.ಶ್ರೀಸಭಾಂಗಣ, ಮಾನಸಗಂಗೋತ್ರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಉದ್ಘಾಟಿಸುವರು. ಹಿರಿಯ ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ ಮುಖ್ಯ ಅತಿಥಿಯಾಗಿರುವರು. ಸಂಸ್ಥೆ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಅಧ್ಯಕ್ಷತೆ ವಹಿಸುವರು.
ನಂತರ ನಡೆಯುವ ಗೋಷ್ಠಿಯಲ್ಲಿ ಡಾ.ಸಿ.ನಾಗಣ್ಣ, ಕೆ.ಗೋವಿಂದರಾಜು, ಡಾ.ಕುಪ್ಪಳ್ಳಿ ಎಂ.ಭೈರಪ್ಪ,ಡಾ.ಆರ್.ಚಲಪತಿ, ಡಾ.ನೀಲಗಿರಿ ತಳವಾರ, ಪ್ರೊ.ಎನ್.ಬೋರಲಿಂಗಯ್ಯ ಮೊದಲಾದವರು ವಿಷಯ ಮಂಡಿಸುವರು. (ಕೆ.ಎಂ.ಆರ್)