ಪ್ರಮುಖ ಸುದ್ದಿ

ವುಶು ಚಾಂಪಿಯನ್‍ಶಿಪ್ : ಕೊಡಗಿನ ವಿದ್ಯಾರ್ಥಿಗಳಿಗೆ ಚಿನ್ನ ಮತ್ತು ಕಂಚಿನ ಪದಕ

ರಾಜ್ಯ(ಮಡಿಕೇರಿ) ಜು.18 : – ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಜು.11 ರಿಂದ 15ರ ವರೆಗೆ ನಡೆದ 18ನೇ ರಾಜ್ಯ ಮಟ್ಟದ ವುಶು ಚಾಂಪಿಯನ್‍ಶಿಪ್‍ನಲ್ಲಿ ಕೊಡಗು ಜಿಲ್ಲೆಯ ವುಶು ಸಂಸ್ಥೆಯ ಕ್ರೀಡಾಪಟುಗಳು 1 ಚಿನ್ನ ಮತ್ತು 5 ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.
ವುಶು ಸಂಸ್ಥೆಯ ವಿದ್ಯಾರ್ಥಿ ಆರ್.ಧನುಷ್ ಚಿನ್ನದ ಪದಕ ಗೆದ್ದಿದ್ದು, ಪಿ.ಆರ್.ಯಶಸ್ಸು, ಎಬೆನ್ ಜಾನ್, ಆಶಿಕ, ಕೃತಿಕ ಹಾಗೂ ಬಿ.ಪಿ.ಅನಿಲ್‍ಕುಮಾರ್ ಕಂಚಿನ ಪದಕ ಪಡೆದಿದ್ದಾರೆ.
ವುಶು ಸಂಸ್ಥೆಯ ಹಿರಿಯ ತರಬೇತುದಾರ ಎನ್.ಸಿ.ಸುದರ್ಶನ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: