ಮೈಸೂರು

ಕನಸುಗಳನ್ನು ಹೆಣೆಯುತ್ತಿರುವ ಜೋಡಿಗಳು : ಪೊಲೀಸ್ ಸರ್ಪಗಾವಲು

ಪ್ರೀತಿ ಪಾತ್ರರನ್ನು ಒಲಿಸಿಕೊಳ್ಳೋದಿಕ್ಕೆ ನಾನಾ ವಿಧದ ಕಸರತ್ತುಗಳನ್ನು ಮಾಡಬೇಕು. ಅದರಲ್ಲೂ ಪ್ರೇಮಿಗಳ ದಿನವಂತೂ ಉಡುಗೊರೆಗಳನ್ನು ನೀಡದೆ ಹೋದರೆ ಅವನು/ಅವಳು ಎಲ್ಲಿ ಮುನಿಸಿಕೊಂಡು ದೂರಾಗಿ ಬಿಡುತ್ತಾರೋ ಎಂಬ ಆತಂಕ ಹಲವರದ್ದಾದರೆ, ಕದ್ದುಮುಚ್ಚಿ ಪಾರ್ಕ್ ಲ್ಲಿ ಕುಳಿತು ಹೊಂಗನಸುಗಳನ್ನು ಹೆಣೆಯುವ ಜೋಡಿಗಳು, ಏನಾದರೂ ವಿವಾದಗಳು ಸೃಷ್ಟಿಯಾದರೆ ಎಂದು ಹದ್ದಿನ ಕಣ್ಣಿರಿಸಿರುವ ಪೊಲೀಸರು ಮೈಸೂರು ನಗರದಲ್ಲಿ ಕಂಡು ಬಂದರು.

ಮೈಸೂರಿನ ಪ್ರಮುಖ ಮಾಲ್ ಗಳು, ಪಾರ್ಕ್ ಗಳು ಕಾಫಿ ಪಾರ್ಲರ್ ಗಳು ಮಂಗಳವಾರ ಪ್ರೇಮಿಗಳ ದಿನವಾದ್ದರಿಂದ ಗಿಜಿಗುಡುತ್ತಿತ್ತು. ಎತ್ತ ಕಣ್ಣು ಹಾಯಿಸಿದರೂ ಕೈಕೈ ಹಿಡಿದು ನಡೆಯುವ ಜೋಡಿಗಳು ಕಾಣಸಿಗುತ್ತಿದ್ದರು. ಹಲವರು ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ನೀಡುವುದಕ್ಕೋಸ್ಕರ್ ಗಿಫ್ಟ್  ಖರೀದಿಸಲು ಗಿಫ್ಟ್ ಸೆಂಟರ್ ಗಳಲ್ಲಿ ಮುಗಿ ಬಿದ್ದಿದ್ದರು.

ಆದರೆ ಪೊಲೀಸರು ತಮ್ಮ ಕರ್ತವ್ಯ ತಾವು ನಿರ್ವಹಿಸಬೇಕೆಂದು ಪಣ ತೊಟ್ಟು ಕುಕ್ಕರಳ್ಳಿ ಕೆರೆ, ಕಾರಂಜಿಕೆರೆ, ಮಹಿಳಾ ಕಾಲೇಜು, ಪಾರ್ಕ್ ಗಳ ಎದುರು ಸರ್ಪಗಾವಲನ್ನು ಹಾಕಿ ಗಸ್ತು ತಿರುಗುತ್ತಿದ್ದರು. ಖುದ್ದು ಡಿಸಿಪಿಗಳೇ ಗಸ್ತು ತಿರುಗುತ್ತಿರುವುದು ಕಂಡು ಬಂತು. ಅಪರಿಚಿತರ ಜೊತೆ ಮಾತನಾಡಬೇಡಿ, ನಿಮ್ಮ ಸ್ನೇಹಿತರೊಂದಿಗೆ ಮಾತ್ರ ಮಾತನಾಡಿ ಎಂಬ ಎಚ್ಚರಿಕೆಯ ಮಾತುಗಳನ್ನು ಕಾಲೇಜು ವಿದ್ಯಾರ್ಥಿನಿಯರಿಗೆ ಪೊಲೀಸರು ಹೇಳಿದ್ದಾರೆ.

ಒಟ್ಟಿನಲ್ಲಿ ಪ್ರೇಮಿಗಳ ದಿನದಂದು ಮೈಸೂರು ಬಣ್ಣಬಣ್ಣದ ಕನಸುಗಳನ್ನು ಹೊತ್ತ ಪೋರ-ಪೋರಿಯರ ಕಲರವದ ಬೀಡಾಗಿದ್ದಂತೂ ಸುಳ್ಳಲ್ಲ.

Leave a Reply

comments

Related Articles

error: