ಮೈಸೂರು

ಆಟೋರಿಕ್ಷಾ ಕಳುವು ಮಾಡಿದ್ದ ರಿಕ್ಷಾ ಕಳ್ಳನ ಬಂಧನ

ಮೈಸೂರು,ಜು.18:- ವಿವಿಧೆಡೆ ಆಟೋರಿಕ್ಷಾ ಕಳುವು ಮಾಡಿದ್ದ ರಿಕ್ಷಾ ಕಳ್ಳನೋರ್ವನನ್ನು  ಮಂಡಿ ಪೊಲೀಸರು ಬಂಧಿಸಿ ಆತನಿಂದ 2 ಆಟೋ ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಕೆಸರೆಯ ಕುರಿಮಂಡಿ ನಿವಾಸಿ ಮಹಮದ್ ಹನೀಫ್ (19)ಎಂದು ಗುರುತಿಸಲಾಗಿದೆ. ಮಂಡಿ ಪೊಲೀಸ್ ಠಾಣೆಯ ಖಬರ್ ಸ್ಥಾನ್ ರಸ್ತೆಯಲ್ಲಿ ಆಟೋ ತಳ್ಳಿಕೊಂಡು ಹೋಗುತ್ತಿದ್ದ ಹನೀಫ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಂಡಿ ಮೊಹಲ್ಲಾ ಮತ್ತು ಶ್ರೀರಂಗಪಟ್ಟಣದಲ್ಲಿ ಎರಡು ಆಟೋ ಕಳುವು ಮಾಡಿರುವುದಾಗಿ ಈತ ಒಪ್ಪಿಕೊಂಡಿದ್ದಾನೆ. ಹನೀಫ್ ನಿಂದ ಆಟೋ ವಶಪಡಿಸಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಡಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಎಲ್.ಅರುಣ್, ಎಎಸ್ ಐ ಕೆ.ಎಸ್.ಗುರುಸ್ವಾಮಿ, ಸಿಬ್ಬಂದಿ ಜಯಪಾಲ, ಎಸ್.ಜಯಕುಮಾರ್, ಚಂದ್ರಶೇಖರ್, ಎಂ.ಎಲಿಯಾಸ್, ರವಿಗೌಡ, ಶಂಕರ್, ಟಿ.ಬಂಡಿವಡ್ಡರ್ ಹನುಮಂತ ಕಲೈದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: