ಮೈಸೂರು

ಯುಪಿಎಸ್‍ಸಿ ಪರೀಕ್ಷೆಗಳ ಕುರಿತ ಅಭಿವಿನ್ಯಾಸ ಕಾರ್ಯಕ್ರಮ

ಮೈಸೂರು,ಜು.18:-  ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ಎಂಟ್ರಿ ಟು ಸರ್ವೀಸ್, ಐಕ್ಯೂಎಸಿ ಮತ್ತು ಕೃತವಿದ್ಯಾ ನಾಗರಿಕ ಸೇವಾ ಪರೀಕ್ಷಾ ತರಬೇತಿ ಅಕಾಡೆಮಿ ಮೈಸೂರು  ಇವರ ಸಹಯೋಗದಲ್ಲಿ ‘ಕೇಂದ್ರ ಲೋಕಸೇವಾ ಆಯೋಗದ’ ಪರೀಕ್ಷೆಗಳ ಕುರಿತು ಅಭಿವಿನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಎನ್.ಐ.ಇ. ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಸಾಗರ್ ಎ. ದೇಶಪಾಂಡೆ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಎಸ್. ವೆಂಕಟರಾಮು, ಕಾರ್ಯಕ್ರಮದ ಆಯೋಜಕರಾದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ ಹೆಚ್, ಎ.ಎಲ್.ಎಸ್. ಅಕಾಡೆಮಿಯ ನಿರ್ದೇಶಕರಾದ   ಶ್ರೀನಿವಾಸ ಭಾರಧ್ವಜ್,   ಶಿವಪ್ರಸಾದ್,   ಲಿಖಿತ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.  (ಎಸ್.ಎಚ್)

Leave a Reply

comments

Related Articles

error: