
ಪ್ರಮುಖ ಸುದ್ದಿ
ಜುಲೈ 19 : ಸಸ್ಯ ಸಂತೆ ; ಸದುಪಯೋಗಕ್ಕೆ ರೈತರಿಗೆ ಮನವಿ
ರಾಜ್ಯ(ಮಂಡ್ಯ)ಜು.19:- ಜುಲೈ 19 ರಂದು ಕಾವೇರಿ ವನ ಮುಂಭಾಗದ ಜಿಲ್ಲಾ ಹಾಪ್ ಕಾಮ್ಸ್, ಮಂಡ್ಯ ಇಲ್ಲಿ ಸಸ್ಯ ಸಂತೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಸ್ಯ ಸಂತೆಯಲ್ಲಿ ಬಹುಮುಖ್ಯವಾಗಿ ತೆಂಗಿನ ಗಿಡಗಳನ್ನು ಮಾರಾಟ ಮಾಡಲಾಗುವುದು.
ಆಸಕ್ತ ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ತೆಂಗಿನ ಗಿಡಗಳ ಅವಶ್ಯಕತೆ ಇದ್ದಲ್ಲಿ ದೂರವಾಣಿ ಸಂಖ್ಯೆ 9845215362 ನ್ನು ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)