ಮೈಸೂರು

ಜು.21 ರಂದು ‘ನಿನದೇ ನೆನಪು’ ಗೀತ ನಮನ ಕಾರ್ಯಕ್ರಮ

ಮೈಸೂರು,ಜು.19- ಹಿರಿಯ ಕಲಾವಿದ ಜೂ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಂದೇ ಖ್ಯಾತರಾಗಿದ್ದ ದಿ.ಲಾರೆನ್ಸ್ ನೆನಪಿಗಾಗಿ ಡಾ.ರಾಜಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ಜು.21 ರಂದು ನಿನದೇ ನೆನಪುಎಂಬ ಶೀರ್ಷಿಕೆಯಡಿ ಗೀತ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆಯೋಜಕ ಜಯರಾಂ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5.30ಕ್ಕೆ ಪುರಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ನಗರಪಾಲಿಕೆ ಮಾಜಿ ಸದಸ್ಯ ಎನ್.ಧ್ರುವರಾಜ್ ಉದ್ಘಾಟಿಸಲಿದ್ದಾರೆ. ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಕರ್ನಾಟಕ ಕಲಾವಿದರ ಸಂಸ್ಥಾನ ಸಂಸ್ಥಾಪಕ ಬಿ.ಎನ್.ಗೋಪಾಲಕೃಷ್ಣ, ಕವಿ ಜಯಪ್ಪ ಹೊನ್ನಾಳಿ, ರಾಬರ್ಟ್ ಉಪಸ್ಥಿತರಿರಲಿದ್ದಾರೆ ಎಂದರು.

ಅದೇ ದಿನ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಡೆಯುವ ಡಾ.ಎಸ್ ಪಿಬಿ ಮತ್ತು ಎಸ್.ಜಾನಕಿ ಕಪ್ ಗಾಯನ ಸ್ಪರ್ಧೆ ನಡೆಯಲಿದ್ದು, 5 ವರ್ಷದಿಂದ 70 ವರ್ಷ ವಯೋಮಾನದವರು ಪಾಲ್ಗೊಳ್ಳಬಹುದಾಗಿದೆ. ‌ಸ್ಪರ್ಧೆಗೆ 500 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುತ್ತದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಲ್ಲೇಶ್, ಗುರುರಾಜ್ ಉಪಸ್ಥಿತರಿದ್ದರು. (ಕೆ.ಎಸ್, ಎಂ.ಎನ್)

Leave a Reply

comments

Related Articles

error: