
ಪ್ರಮುಖ ಸುದ್ದಿ
ಅಪರಿಚಿತ ಮೃತ ಮಹಿಳೆ : ವಿಳಾಸ ಪತ್ತೆಗೆ ಮನವಿ
ರಾಜ್ಯ(ಮಂಡ್ಯ)ಜು.20:- ಬೆಳ್ಳೂರು ಪೊಲೀಸ್ ಠಾಣಾ ಸರಹದ್ದಿನ ವಡೇಪುರ ಗ್ರಾಮದ ವಿ.ಬಿ.ಲಿಂಗೇಶರವರ ಜಮೀನಿನಲ್ಲಿ ಸುಮಾರು 30 ರಿಂದ 35 ವರ್ಷದ ಅಪರಿಚಿತ ಹೆಂಗಸಿನ ಶವ ಪತ್ತೆಯಾಗಿದೆ.
ಮೃತ ಮಹಿಳೆಯ ವಿಳಾಸ ಪತ್ತೆಯಾಗಿರುವುದಿಲ್ಲ. ಹೆಚ್ಚಿನ ಮಾಹಿತಿಗೆ ನಾಗಮಂಗಲ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ. (ಕೆ.ಎಸ್,ಎಸ್.ಎಚ್)