
ಪ್ರಮುಖ ಸುದ್ದಿ
ಸಾಲ ಮನ್ನಾ ಯೋಜನೆಯ ಅವಧಿ ಜು.31ರವರೆಗೆ ವಿಸ್ತರಣೆ
ರಾಜ್ಯ(ಮಂಡ್ಯ)ಜು.20:- ಕರ್ನಾಟಕ ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆ-2018ರ ಪ್ರಯೋಜನ ಪಡೆಯಲು ಜುಲೈ 10 ಕೊನೆಯ ದಿನಾಂಕವಾಗಿದ್ದು. ಕೆಲವು ರೈತರುಗಳು ಸುಸ್ತಿಸಾಲದ ಮೇಲಿನ ಬಡ್ಡಿರೂ. 1.00 ಲಕ್ಷ ಮೇಲ್ಪಟ್ಟ ಅಸಲು ಹಾಗೂ ಚಾಲ್ತಿ ಸಾಲ ರೂ.1.00 ಲಕ್ಷ ಮೇಲ್ಪಟ್ಟ ಅಸಲನ್ನು ಮರುಪಾವತಿಸದೆ ಇರುವುದರಿಂದ ಸರ್ಕಾರದ ಸಾಲ ಮನ್ನಾ ಸೌಲಭ್ಯ ಪಡೆಯಲು ಸಾಧ್ಯವಾಗಿರುವುದಿಲ್ಲ.
ಆದ್ದರಿಂದ ರಾಜ್ಯ ಸರ್ಕಾರದ ಆದೇಶದನ್ವಯ ಸಾಲ ಮನ್ನಾ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ.
ಜುಲೈ 31 ರೊಳಗೆ ರೂ 1.ಲಕ್ಷ ಮೇಲ್ಪಟ್ಟ ಚಾಲ್ತಿ ಮತ್ತು ಸುಸ್ತಿ ಸಾಲಗಳ ಅಸಲನ್ನು ಹಾಗೂ ಈ ಸಾಲಗಳ ಮೇಲಿನ ಸಾಮಾನ್ಯ ಬಡ್ಡಿದರದಲ್ಲಿ ಬಡ್ಡಿಯನ್ನು ಮರುಪಾವತಿಸಿ, ಸಾಲ ಮನ್ನಾ ಯೋಜನೆಯಡಿ ರೂ. 1 ಲಕ್ಷಗಳವರೆಗಿನ ಪ್ರಯೋಜನ ಪಡೆಯಲು ತಿಳಿಯಪಡಿಸಿದೆ. ಈ ಸೌಲಭ್ಯವನ್ನು ಪಡೆಯಲು ನಿಮ್ಮ ಹತ್ತಿರದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳನ್ನು ಭೇಟಿ ಮಾಡಿ, ಮಾಹಿತಿಯನ್ನು ಪಡೆದು ಸಾಲ ಮನ್ನಾ ಸೌಲಭ್ಯ ಪಡೆಯುವಂತೆ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದೆ. (ಕೆ.ಎಸ್,ಎಸ್.ಎಚ್)