ದೇಶಪ್ರಮುಖ ಸುದ್ದಿ

ಭೀಕರ ಅಪಘಾತ : ಟ್ರಕ್ ಗೆ ಕಾರು ಡಿಕ್ಕಿ; ಒಂಭತ್ತು ಮಂದಿ ಸ್ಥಳದಲ್ಲೇ ಸಾವು

ದೇಶ(ಪುಣೆ)ಜು.20:- ಪುಣೆಯ ಕದಮ್ ವಾಕ್ ವಸ್ತಿ ಬಳಿ ನಡೆದ ಭೀಕರ ಅಪಘಾತದಲ್ಲಿ ಒಂಭತ್ತು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪುಣೆ-ಸೋಲಾಪುರ ಹೆದ್ದಾರಿಯಲ್ಲಿ ಟ್ರಕ್ ಗೆ ಕಾರು ಡಿಕ್ಕಿ ಹೊಡೆದಿದ್ದು,  ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದು,  ಅಪಘಾತ ಎಷ್ಟು ಭೀಕರವಾಗಿತ್ತೆಂಬುದು ತಿಳಿಯಲಿದೆ.

ನಿನ್ನೆ ತಡರಾತ್ರಿ ಕಾರು ಮತ್ತು ಟ್ರಕ್​ ಮುಖಾಮುಖಿ ಡಿಕ್ಕಿಯಾಗಿವೆ. ಮೃತರನ್ನು ಅಕ್ಷಯ್​ ಭರತ್​ ವೈಕರ್​, ವಿಶಾಲ್​ ಸುಭಾಷ್​ ಯಾದವ್​, ನಿಖಿಲ್​ ಚಂದ್ರಕಾಂತ್​, ನೂರ್​ ಮಹಮ್ಮದ್​ ಅಬ್ಬಾಸ್​ ದಯಾ, ಪರ್ವೇಜ್​ ಅತ್ತರ್​, ಶುಭಂ ರಾಮ್​ದಾಸ್​ ಭಿಸೆ, ಅಕ್ಷಯ್​ ಚಂದ್ರಕಾಂತ್​, ದತ್ತ ಗಣೇಶ್​ ಯಾದವ್​, ಜುಬೇರ್ ಅಜೀಜ್ ಮುಲಾನಿ ಎಂದು ಗುರುತಿಸಲಾಗಿದ್ದು,  ಪುಣೆಯ ಯಾವತ್​ ಗ್ರಾಮದವರಾದ ಇವರೆಲ್ಲರೂ ಕಾಲೇಜು ವಿದ್ಯಾರ್ಥಿಗಳು ಎನ್ನಲಾಗಿದೆ.

ಇವರೆಲ್ಲ ರಾಯಗಢಕ್ಕೆ ಪ್ರವಾಸಕ್ಕೆ ತೆರಳಿ ಪುಣೆಗೆ ಮರಳುವಾಗ ಅಪಘಾತ ಸಂಭವಿಸಿದೆ. ಕಾರು ಡಿವೈಡರ್​ ಬಳಿ ಜಂಪ್​ ಆಗಿದ್ದು, ಅದೇ ಸಮಯಕ್ಕೆ ಪುಣೆ ಕಡೆಯಿಂದ ಬರುತ್ತಿದ್ದ ಬರುತ್ತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಪುಣೆ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. (ಎಸ್.ಎಚ್)

Leave a Reply

comments

Related Articles

error: