ಪ್ರಮುಖ ಸುದ್ದಿಮೈಸೂರು

ಎಂ.ಕೆ.ಎಸ್. ಬ್ರಿಗೇಡ್ ಸ್ವಯಂ ಸೇವಾ ಸಂಸ್ಥೆ : ಲೋಗೋ ಬಿಡುಗಡೆ

ಸಾಮಾಜಿಕ ಕಳಕಳಿ ಕಾರ್ಯಕ್ರಮ

ಮೈಸೂರು. ಜು.20: ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಎಂ.ಕೆ.ಎಸ್. ಬ್ರಿಗೇಡ್ ಸ್ವಯಂ ಸೇವಾ ಸಂಸ್ಥೆ  ಲೋಗೋವನ್ನು ಪತ್ರಕರ್ತರ ಭವನದಲ್ಲಿ  ಶನಿವಾರ ಬಿಡುಗಡೆಗೊಳಿಸಲಾಯಿತು.

ಬ್ರಿಗೇಡ್ ಅಧ್ಯಕ್ಷ ಹೆಚ್.ಜೆ.ಪ್ರಮೋದ್ ಮಾತನಾಡಿ. ಮಾಜಿ ಶಾಸಕ ಎಂ.ಕೆ.ಎಸ್ ಅವರು ಕ್ಚೇತ್ರದ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು, ಈ ನಿಟ್ಟಿನಲ್ಲಿ ನಡೆಸುತ್ತಿದ್ದ ಉದ್ಯೋಗ ಮೇಳ ಜನಪ್ರಿಯ ಕಾರ್ಯಕ್ರಮಗಳೊಂದಾಗಿತ್ತು.  ವಿದ್ಯಾವಂತ ನಿರುದ್ಯೋಗಿಗಳಿಗೆ ಹೆಚ್ಚು ಅನುಕೂಲವಾಗಿದ್ದು ಅದರಲ್ಲೂ ವಿಶೇಷವಾಗಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು.‌ ಆ ನಿಟ್ಟಿನಲ್ಲಿ ಈ ಸಂಸ್ಥೆ ಹುಟ್ಟು ಹಾಕಲಾಗಿದೆ ಎಂದು ತಿಳಿಸಿದರು.

ಸಂಸ್ಥೆಯು ಸಾಮಾಜಿಕ ಅರಿವು, ಪರಿಸರ ಜಾಗೃತಿ, ಕ್ಷೇತ್ರದ ಅಭಿವೃದ್ಧಿ ಕಾರ್ಯ ಯೋಜನೆ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಂಸ್ಥೆಯಿಂದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಜೈ ಅರ್ಜುನ್. ಉಪಾಧ್ಯಕ್ಷ ರಾಹುಲ್ ಮಾರ್ಷ್, ಕಾರ್ಯದರ್ಶಿ ಸ್ಟೀವನ್ ಫರ್ನಾಂಡಿಸ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: