ಮೈಸೂರು

ಫೀಸಿಬಿಲಿಟಿ ಆಫ್ ಟೆಕ್ನಾಲಜಿ ಟ್ರಾನ್ಸಫರ್ ಕೋರ್ಸ್ ಗೆ ಚಾಲನೆ

ಮಾನವ ಸಂಪನ್ಮೂಲ ಮತ್ತು  ಅಭಿವೃದ್ಧಿ ಸಚಿವಾಲಯವು ಅಂತರರಾಷ್ಟ್ರೀಯ ವಿಜ್ಞಾನ ಮತ್ತು ವಾಣಿಜ್ಯೋದ್ಯಮಿಗಳ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಅವರ ಬೆಳವಣಿಗೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಭಾರತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶೈಕ್ಷಣಿಕ ನೆಟ್ ವರ್ಕ್ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲು ಪ್ರೋತ್ಸಾಹಿಸಿದ್ದು, ಶ್ರೀಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಫೀಸಿಬಿಲಿಟಿ ಆಫ್ ಟೆಕ್ನಾಲಜಿ ಟ್ರಾನ್ಸಫರ್ ಕೋರ್ಸನ್ನು ಆಯೋಜಿಸಲಾಗಿದೆ.

ಫೇ.10ರಿಂದ 20ರವರೆಗೆ ನಡೆಯುವ ಕಾರ್ಯಕ್ರಮಕ್ಕೆ ಆಸ್ಟ್ರೇಲಿಯ ಗ್ರಿಫಿತ್ ವಿವಿಯ  ಘನತ್ಯಾಜ್ಯ ನಿರ್ವಹಣೆಯ ತರಬೇತುದಾರ ಡಾ.ಸುನಿಲ್ ಹೆರಾಟ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಮತ್ತು ನಗರಸಭೆಯ ಘನ ತ್ಯಾಜ್ಯ ನಿರ್ವಹಣಾಧಿಕಾರಿಗಳು, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನಗರದ ಸ್ವಚ್ಛತೆಯನ್ನು ಕಾಪಾಡಲು ಘನತ್ಯಾಜ್ಯ ನಿರ್ವಹಣೆಯು ಸಮಾಜದ ಒಂದು ಅವಿಭಾಜ್ಯ ಅಂಗವಾಗಿದ್ದು, ಸಮಗ್ರ ತ್ಯಾಜ್ಯ ನಿರ್ವಹಣೆಗೆ ಬೇಕಾದ ಮೂಲಭೂತ ಸೌಕರ್ಯಗಳು ಮತ್ತು ಸೇವೆಗಳನ್ನು ಪ್ರಸ್ತುತ ಸಮಾಜವು ಹೊಂದಿಲ್ಲ. ಸಮಗ್ರ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಕಾರ್ಯನೀತಿಗಳು ಮತ್ತು ಶಾಸನದ ಕೊರತೆ ವಿಶ್ವದ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿದೆ ಈ ಕುರಿತ ಜಾಗೃತಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ.

Leave a Reply

comments

Related Articles

error: