ಪ್ರಮುಖ ಸುದ್ದಿಮೈಸೂರು

ಜು.26ರಂದು ರಾಜ್ಯಾದ್ಯಂತ ‘ಜರ್ಕ್’ ಚಿತ್ರ ತೆರೆಗೆ

ಜೀವನ ಸಂದೇಶ ಸಾರುವ ಕಥಾ ಹಂದರ

ಮೈಸೂರು, ಜು.20 : ವೇಗವಾಗಿ ಸಾಗುತ್ತಿದ್ದ ಜೀವನ, ಆಕಸ್ಮಿಕವಾಗಿ ಬರುವ ತಿರುವುಗಳಿಂದ ಒಮ್ಮೆಲೆ ನಿಂತಾಗ ಏನೆಲ್ಲ ಪರಿಣಾಮವಾಗುವುದೆಂಬ ಸಂದೇಶ ಸಾರುವ ‘ಜರ್ಕ್’ ಚಲನಚಿತ್ರವನ್ನು ಜು.26 ರಂದು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುವುದು ಎಂದು ನಿರ್ದೇಸಕ ಮಹಂತೇಶ್ ಮದಕರಿ ತಿಳಿಸಿದರು.

ಶನಿವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಮೆಟ್ರೋದಲ್ಲಿ  ಕಾರ್ಯನಿರ್ವಹಿಸುವ ಉದ್ಯೋಗಿಗಳು ಸೇರಿ ಮಯೂರ ಪ್ರೋಡಕ್ಷನ್ ಅಡಿ ನಿರ್ಮಿಸಿದ್ದು, ಜೀವನದ ಬಗ್ಗೆ ಸಂದೇಶ ಚಿತ್ರದಲ್ಲಿ ಹೇಳಲಾಗಿದೆ.  ಕಥೆ, ಚಿತ್ರಕಥೆ ನಾನೇ ಬರೆದಿರುವೆ ಎಂದು ತಿಳಿಸಿದರು.

ಕೆಎಎಸ್ ಕೋಚಿಂಗ್ ಕ್ಲಾಸ್‌ಗೆಂದು ಬೇರೊಂದು ಊರಿನಿಂದ ಬೆಂಗಳೂರಿಗೆ ಬರುವ ಹುಡುಗನಿಗೆ ಆಗುವ ಅನುಭವಗಳ ಪರಿಕಲ್ಪನೆಯಲ್ಲಿ ಕಥೆ ಹೆಣೆಯಲಾಗಿದೆ.  ಕಮರ್ಶಿಯಲ್ ಅಂಶಗಳೊಂದಿಗೆ ಉತ್ತಮ ಸಂದೇಶ ಚಿತ್ರದಲ್ಲಿದೆ ಎಂದರು.

ಚಿತ್ರದಲ್ಲಿರುವ ಐಟಂ ಸಾಂಗ್‌ಗೆ ತ್ರಿಭುವನ್ ಮಾಸ್ಟರ್ ನೃತ್ಯ ನಿರ್ದೇಶಿಸಿದ್ದು, ಬೆಂಗಳೂರು, ರಾಮನಗರ, ದೇವರಾಯನದುರ್ಗ, ಬೀದರ್, ಕಾಶ್ಮೀರಿ ಕಣಿವೆ ಕುಲುಮನಾಲಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ನೆಲೆಮನೆ ರಾಘವೇಂದ್ರ, ಪಾಲ್ಸ್‌  ನಾಗ ಅವರ ಸಾಹಿತ್ಯವಿರುವ ನಾಲ್ಕು ಹಾಡುಗಳಿಗೆ ಎಡ್ವರ್ಡ್ ಷಾ ಸಂಗೀತ ಸಂಯೋಜಿಸಿದ್ದಾರೆ ಎಂದರು.

ತಿಥಿ ಖ್ಯಾತಿಯ ಗಡ್ಡಪ್ಪ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಮುಖ್ಯಭೂಮಿಕೆಯಲ್ಲಿ ಕೃಷ್ಣರಾಜ್, ಸಚ್ಚಿನ್, ನಿತ್ಯಾರಾಜ್, ಆಶಾಭಂಡಾರಿ, ಮಜಾಟಾಕೀಸ್ ಪವನ್, ಕುರಿರಂಗ ಅಭಿನಯಿಸಿದ್ದಾರೆ ಎಂದರು.

ಮಜಾಟಾಕೀಸ್ ಪವನ್ ಮಾತನಾಡಿ, ಕನ್ನಡ ಚಿತ್ರ ಹೆಚ್ಚು ಪ್ರದರ್ಶನ ಕಾಣಬೇಕು.  ಕನ್ನಡ ಚಿತ್ರರಂಗ ಉಳಿಯಬೇಕು, ನಿರ್ದೇಶಕರು ಬೆಳೆಯಬೇಕು ಎಂದು ಹೇಳಿದರು.

ಮನುಷ್ಯ ದೊಡ್ಡವನಾಗಿ ಕಾಣುವುದು ಸಿನಿಮಾದಲ್ಲಿ, ಚಿಕ್ಕವನಾಗಿ ಕಾಣುವುದು ಟಿವಿಯಲ್ಲಿ, ಮನುಷ್ಯನಾಗಿಯೇ ಕಾಣುವುದು ರಂಗಭೂಮಿಯಲ್ಲಿ ಮಾತ್ರ. ನಾನು ರಂಗಭೂಮಿ ಕಲಾವಿದ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಈಗ ಕಲಿತಿರುವುದು ತುಂಬಾ ಕಡಿಮೆ. ಇನ್ನು ಕಲಿಯಲು ಬಹಳಷ್ಟಿದೆ ಎಂದರು.

ಗೋಷ್ಠಿಯಲ್ಲಿ ತಿಥಿ ಖ್ಯಾತಿಯ ಗಡ್ಡಪ್ಪ, ನಟ ಕೃಷ್ಣರಾಜ್, ನಟಿಯರಾದ ನಿತ್ಯಾರಾಜ್, ಆಶಾಭಂಡಾರಿ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: