ಮೈಸೂರು

ಜಾತೀಯ ಆಧಾರದಲ್ಲಿರುವ ಬಡತನವನ್ನು ನಿವಾರಿಸಲು ಸಾಧ್ಯವಿಲ್ಲ : ಪ್ರೊ.ಡಿ.ಆನಂದ್ ಅಭಿಮತ

ದೇಶದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಬಡತನವನ್ನು ಹೇಗಾದರೂ ನಿವಾರಿಸಬಹುದು. ಆದರೆ ಜಾತಿಯ ಆಧಾರದಲ್ಲಿ ಬಡತನವಿದ್ದರೆ ಅದನ್ನು ನಿವಾರಿಸಲು ಸಾಧ್ಯವಿಲ್ಲ ಎಂದು ಪ್ರೊ.ಡಿ. ಆನಂದ್ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ  ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜಯಂತಿಯ ವರ್ಷಾಚರಣೆಯ ಅಂಗವಾಗಿ ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ, ಅಂತಾರಾಷ್ಟ್ರೀಯ ಸಮ್ಮೇಳನದ ವಿಭಾಗೀಯ ಮಟ್ಟದ ಸಾಮಾಜಿಕ ಕಾರ್ಯಕರ್ತರಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಮೀಸಲಾತಿ: ಮಹಿಳೆ, ಎಸ್.ಸಿ, ಎಸ್.ಟಿ, ಓಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ತಲ್ಲಣಗಳು ಮತ್ತು ಅಂಬೇಡ್ಕರ್ ಚಿಂತನೆಯ ಹಿನ್ನಲೆಯಲ್ಲಿ ಸಬಲೀಕರಣ ಕುರಿತ ವಿಚಾರಗೋಷ್ಠಿಯಲ್ಲಿ  ಪಾಲ್ಗೊಂಡು ಮಾತನಾಡಿದರು.

ವ್ಯಕ್ತಿಯೊಬ್ಬ ಕೋಟಿಗಟ್ಟಲೆ ಹಣ ಸಂಪಾದಿಸಿದ್ದರೂ ಆತ ಯಾವ ಜಾತಿಗೆ ಸೇರಿದವನು ಎಂದು ಕೇಳುವವರ ಮಧ್ಯೆಯೇ ನಾವು ಬದುಕುತ್ತಿದ್ದೇವೆ ಎಂದರು. ಜಾತಿಯ ಲಾಭ ಪಡೆಯುವವರಿಂದ ಜಾತಿಯ ಪೋಷಣೆ ನಡೆಯುತ್ತಿದೆ. ಮೇಲ್ವರ್ಗ ಮೀಸಲಾತಿಯ ಕುರಿತು ಯುವಪೀಳಿಗೆಯಲ್ಲಿ  ಕೆಟ್ಟ ಭಾವನೆ ಹುಟ್ಟಿಸಿ, ಕೀಳರಿಮೆ ಹುಟ್ಟಿಸುತ್ತಿದೆ. ದೇಶದಲ್ಲಿ ಜಾಗತೀಕರಣ ಖಾಸಗೀಕರಣ ಭದ್ರವಾಗಿ ತಳವೂರುತ್ತಿದ್ದು, ಮೀಸಲಾತಿಯೇ ಇಲ್ಲವಾದರೆ ಹೇಗೆ ಯುವ ಪೀಲಿಗೆಯನ್ನು ಜಗತ್ತಿಗೆ ನೀಡಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭ  ಕೆ.ಬಸವರಾಜು, ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ ಜಿಲ್ಲಾ ಸಂಯೋಜಕ ಭೀಮನಹಳ್ಳಿ ಸೋಮೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: