ಸುದ್ದಿ ಸಂಕ್ಷಿಪ್ತ

ಅರಿವಿನ ಮನೆ ಮಹಿಳಾ ಬಳಗದ 10ನೇ ವಾರ್ಷಿಕೋತ್ಸವ ನಾಳೆ

ಮೈಸೂರು,ಜು.20 : ಅರಿವಿನ ಮನೆ ಮಹಿಳಾ ಬಳಗ 10ನೇ ವಾರ್ಷಿಕೋತ್ಸವದ ಅಂಗವಾಗಿ ಜೈಜವಾನ್ ಜೈಕಿಸಾನ್ ಭಾರತ ಬೆಳಗೋಣ ಕಾರ್ಯಕ್ರಮವನ್ನು ಜು.21ರ ಬೆಳಗ್ಗೆ 10.30ರಿಂದ ಜೆಪಿ ನಗರದ ಪುಟ್ಟರಾಜ ಗವಾಯಿಗಳ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಶಾಸಕ ಎಸ್.ಎ.ರಾಮದಾಸ್ ಉದ್ಘಾಟನೆ, ಮಹಾನಗರ ಪಾಲಿಕೆ ಸದಸ್ಯ, ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಅಧ್ಯಕ್ಷತೆ, ಉಪನ್ಯಾಸಕಿ ಡಾ.ಸಿ.ತೇಜೋವತಿ, ಬಿಜೆಪಿ ಮುಖಂಡರ ಯು.ಎಸ್.ಶೇಖರ್ ಬಹುಮಾನ ವಿತರಿಸಲಿದ್ದಾರೆ. ಇದರೊಂದಿಗೆ ಹಲವು ಗಣ್ಯರನ್ನು ಸನ್ಮಾನಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: