
ಕ್ರೀಡೆಪ್ರಮುಖ ಸುದ್ದಿ
ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿ: ಮೊದಲೆರಡು ಪಂದ್ಯಗಳಿಗೆ ಟೀಂ ಇಂಡಿಯಾ ಪ್ರಕಟ
ನವದೆಹಲಿ: ನಾಲ್ಕು ಪಂದ್ಯಗಳ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಟೀಂ ಇಂಡಿಯಾ ಆಟಗಾರರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ಫೆ.23ರಿಂದ ಮಾರ್ಚ್ 29 ರ ವರೆಗೆ ನಾಲ್ಕು ಟೆಸ್ಟ್ ಪಂದ್ಯಗಳು ಆಸ್ಟ್ರೇಲಿಯ ಮತ್ತು ಭಾರತ ನಡುವೆ ನಡೆಯಲಿದೆ. ಮೊದಲ ಪಂದ್ಯ ಪುಣೆಯಲ್ಲಿ ಪ್ರಾರಂಭಗೊಳ್ಳಲಿದೆ.
ಮೊದಲ ಎರಡು ಟೆಸ್ಟ್’ಗಳಿಗೆ ಪ್ರಕಟವಾಗಿರುವ ಟೀಂ ಇಂಡಿಯಾ ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್.ರಾಹುಲ್, ಚೇತೇಶ್ವರ್ ಪೂಜಾರಾ, ಮುರಳಿ ವಿಜಯ್, ಕರುಣ್ ನಾಯರ್, ಅಂಜಿಕ್ಯಾ ರಹಾನೆ, ಆರ್. ಅಶ್ವಿನ್, ವೃದ್ಧಿಮಾನ್ ಸಹಾ, ರವೀಂದ್ರ ಜಡೇಜಾ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಜಯಂತ್ ಯಾದವ್, ಅಭಿನವ್ ಮುಕುಂದ್, ಇಶಾಂತ್ ಶರ್ಮಾ, ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯಾ ಆಯ್ಕೆಯಾದ ತಂಡದಲ್ಲಿದ್ದಾರೆ.
ವೇಳಾಪಟ್ಟಿ | |
ಮೊದಲ ಟೆಸ್ಟ್ ಪಂದ್ಯ | ಫೆಬ್ರವರಿ 23-27 ಪುಣೆ |
ದ್ವಿತೀಯ ಟೆಸ್ಟ್ ಪಂದ್ಯ | ಮಾರ್ಚ್ 4-8 ಬೆಂಗಳೂರು |
ಮೂರನೇ ಟೆಸ್ಟ್ ಪಂದ್ಯ | ಮಾರ್ಚ್ 16-20 ರಾಂಚಿ |
ನಾಲ್ಕನೇ ಟೆಸ್ಟ್ ಪಂದ್ಯ | ಮಾರ್ಚ್ 25-29 ಧರ್ಮಶಾಲಾ |