ಮೈಸೂರು

ಆದರ್ಶ ಆರಾಧ್ಯನನ್ನು ಕಾಲೇಜಿಗೆ ನೋಂದಾಯಿಸಿಕೊಂಡರೆ ಉಗ್ರ ಹೋರಾಟ : ಕೆ.ಎಂ.ಶಶಿಧರ

ಹೆಣ್ಣು ಮಕ್ಕಳ ಜೀವನ ಹಾಗೂ ಭವಿಷ್ಯದೊಂದಿಗೆ ಚಲ್ಲಾಟವಾಡುವ ದುಷ್ಟರಿಗೆ ಯಾವುದೇ ಕಾರಣದಿಂದ ಕ್ಷಮೆಯಾಗಬಾರದು ಹಾಗೂ ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಬೇಕು ಎಂದು ದುಃಖಭರಿತ ಅವೇಶದಿಂದ ನುಡಿದಿದ್ದು ಬಳ್ಳಾರಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಂ.ಶಶಿಧರ.

ಅವರು ಪತ್ರಕರ್ತರ ಭವನದಲ್ಲಿ ಮಾತನಾಡಿ ಆದರ್ಶ ಆರಾಧ್ಯ ಎನ್ನುವ ದುಷ್ಟ ನನ್ನ ಮಗಳು ಸ್ವಾತಿಯನ್ನೇ ಬಲಿತೆಗೆದುಕೊಂಡಿದ್ದು ಅಂತಹ ವ್ಯಕ್ತಿಗೆ ಎಂದಿಗೂ ಕ್ಷಮೆಯಾಗಬಾರದು ಹಾಗೂ ಸಮಾಜದಿಂದ ಇಂತಹ ವ್ಯಕ್ತಿಗಳಿಗೆ ತಕ್ಕ ಶಾಸ್ತಿಯಾಗಿ ಭವಿಷ್ಯವೇ ನಿರ್ನಾಮವಾಗಬೇಕೆಂದು ನೊಂದು ನುಡಿದರು.

ಸಾರಾಂಶ : ಸ್ವಾತಿ ಸ್ಥಳೀಯ ಜೆ.ಎಸ್.ಎಸ್. ಕಾಲೇಜಿನಲ್ಲಿ ಮೂರನೇ ವರ್ಷದ ಫಾರ್ಮಸಿ ಪದವಿ ವಿದ್ಯಾರ್ಥಿನಿ, ಆಕೆಗೆ ಮುಳುವಾಗಿದ್ದೆ ಆಕೆಯ ಸಹಪಾಠಿ ಆದರ್ಶ ಜಿ.ಆರಾಧ್ಯ ಆತನ ಕಾಟ ತಾಳಲಾರದೆ 2015ರ ಏಪ್ರಿಲ್‍ 15ರಂದು ಆತ್ಮಹತ್ಯೆಗೆ ಶರಣಾದಳು. ಇದಷ್ಟೇ ಅಲ್ಲದೇ ಈತನ ವಿರುದ್ಧ  ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ಅನೂಜ್ಞ ಎಂಬ ಯುವತಿಯ ಮೊಬೈಲ್‍ಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಆಕೆಯನ್ನು ಬ್ಲಾಕ್ ಮೇಲ್ ಮಾಡುವ ಮೂಲಕ ಹಣಕ್ಕೆ ಬೇಡಿಕೆ ಇಟ್ಟ ಕುರಿತು ಪ್ರಕರಣ ದಾಖಲಾಗಿದೆ. ಅಲ್ಲದೇ ಸ್ವಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಂಗ ಬಂಧನ ಅನುಭವಿಸಿದ್ದಾನೆ. ಇಂತಹ ಕ್ರಿಮಿನಲ್ ವ್ಯಕ್ತಿತ್ವವಿರುವ ವಿದ್ಯಾರ್ಥಿಗೆ ಪ್ರವೇಶ ನೀಡಲು ಜೆ.ಎಸ್.ಎಸ್. ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದ್ದ ಕ್ರಮಕ್ಕೆ ವಿದ್ಯಾರ್ಥಿ ಸಂಘಟನೆಗಳು ವಿರೋಧಸಿ ಕಪ್ಪು ಪಟ್ಟಿಧರಿಸಿ ಪ್ರತಿಭಟನೆಯನ್ನು  ನಡೆಸಿವೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳನ್ನು ಧಮನಿಸಲು ಕಾಲೇಜು ಆಡಳಿತ ಮಂಡಳಿ ಸಕಲ ಪ್ರಯತ್ನ ನಡೆಸಿದೆ ಎಂದು ಮೃತ ಸ್ವಾತಿ ತಂದೆ, ದೂರಿದ್ದಾರೆ.

ಪ್ರತಿಭಟನೆ : ಕ್ರಿಮಿನಲ್ ಹಿನ್ನೆಲೆಯಿರುವ ಆದರ್ಶ ಆರಾಧ್ಯನಿಗೆ ಕಾಲೇಜಿನಲ್ಲಿ ಪ್ರವೇಶನೀಡಬಾರದೆಂದು ವಿದ್ಯಾರ್ಥಿಗಳು, ಒಕ್ಕೂಟಗಳೇ ಬೀದಿಗಿಳಿದು ಹೋರಾಟ ನಡೆಸಿದ್ದು ಈ ನಡೆಗೆ ಆ ವಿದ್ಯಾರ್ಥಿಯ ದುರ್ವರ್ತನೆಯೇ ಕಾರಣ ಎನ್ನಲಾಗಿದೆ. ಪ್ರಕರಣವನ್ನು ಲಘುವಾಗಿ ಪರಿಗಣಿಸಿರುವ ಕಾಲೇಜು ಆಡಳಿತ ಮಂಡಳಿ ತಾತ್ಸಾರ ಮಾಡುತ್ತಿದ್ದು, ವಿದ್ಯಾರ್ಥಿಗೆ ಮತ್ತೊಮ್ಮೆ ನೋಂದಾಯಿಸಿಕೊಳ್ಳುವ ಕುರಿತ  ಅನುಮಾನಗಳು ಮೂಡಿದ್ದು ಅವನಿಗೆ ಪ್ರವೇಶ ನೀಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಶಶಿಧರ ತಿಳಿಸಿದರು.

ಗುರುಸಿದ್ಧನಗೌಡ ಹಾಗೂ ಸ್ವಾತಿ ಸಹೋದರ ಕೆ.ಎಂ.ಹರ್ಷವರ್ಧನ್ ಉಪಸ್ಥಿತರಿದ್ದರು.

 

 

Leave a Reply

comments

Related Articles

error: