ಪ್ರಮುಖ ಸುದ್ದಿ

ಇಂದು ರಾಜ್ಯ ರಾಜಕಾರಣದ ಹೈ ಡ್ರಾಮಾಕ್ಕೆ ತೆರೆ ಬೀಳಲಿದೆಯಾ ತೆರೆ ?

ರಾಜ್ಯ(ಬೆಂಗಳೂರು)ಜು.22:- ಇಂದು ರಾಜ್ಯ ರಾಜಕಾರಣದ ಹೈ ಡ್ರಾಮಾಕ್ಕೆ ತೆರೆ ಬೀಳುವ  ಸಾಧ್ಯತೆ ಇದ್ದು, ಇಂದು ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇನ್ನೊಂದೆಡೆ ವಿಶ್ವಾಸ ಮತಯಾಚನೆಗೆ ಹಾಜರಾಗಲ್ಲ ಎಂದು ಅತೃಪ್ತ ಶಾಸಕರು ಹೇಳಿದ್ದಾರೆ.  ಕೊನೆಗಳಿಗೆಯಲ್ಲಿ ಅತೃಪ್ತರನ್ನು ಸಂಪರ್ಕಿಸೋ  ಪ್ರಯತ್ನ ಜೆಡಿಎಸ್ ಮಾಡಿದೆ. ಬಿಜೆಪಿಯ 6ನೇ ಬಾರಿಯ ಆಪರೇಷನ್ ಕಮಲಕ್ಕೆ  ತಣ್ಣೀರೆರಚಲು ದೋಸ್ತಿ ಟೀಮ್  ಬಾರಿ ಅಸ್ತ್ರಗಳನ್ನೇ ಬಳಸುತ್ತಿದೆ. ಇನ್ನೊಂದೆಡೆ ವಿಶ್ವಸಮತ ಸಾಬೀತು ಪಡಿಸುವಂತೆ  ರಾಜ್ಯಪಾಲರಿಂದ  ಸಿಎಂ ಗೆ ಕರೆ ಬಂದಿದೆ.

ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕೈ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ   ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದ್ದು,  ಇಂದಾದರೂ  ರಾಜ್ಯದ ರಾಜಕೀಯ ಜಂಜಾಟಗಳಿಗೆ  ನಮ್ಮ ಜನಪ್ರತಿನಿದಿಗಳು  ತೆರೆ ಎಳೆಯಲಿದ್ದಾರಾ  ಎಂಬುದನ್ನು ಕಾದು ನೋಡಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: