ಮೈಸೂರು

ಸಂಸ್ಥೆಗಳು ಅತಿ ಲಾಭದ ಆಸೆ ಹುಟ್ಟಿಸಿ ವಶೀಕರಣಗೊಳಿಸಿಕೊಂಡು ಮೋಸ ಮಾಡುತ್ತಿದ್ದು, ಗ್ರಾಹಕರು ಎಚ್ಚೆತ್ತುಕೊಳ್ಳುವ ಅವಶ್ಯಕತೆಯಿದೆ : ಪಿ.ಶಿವಣ್ಣ

ಮೈಸೂರು,ಜು.22:- ಕೆಲವು ಸಂಸ್ಥೆಗಳು ಅತಿ ಲಾಭದ ಆಸೆ ಹುಟ್ಟಿಸಿ ಪ್ರಾರಂಭದಲ್ಲಿ ತಮ್ಮ ವಶೀಕರಣಗೊಳಿಸಿಕೊಂಡು ಜನರಿಗೆ ಮೋಸ ಮಾಡುತ್ತಿದ್ದು, ಗ್ರಾಹಕರು ಎಚ್ಚೆತ್ತುಕೊಳ್ಳುವ ಅವಶ್ಯಕತೆಯಿದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ತಿಳಿಸಿದರು.

ಅವರಿಂದು ಇನ್ಸಟಿಟ್ಯೂಟ್ ಆಫ್ ಇಂಜಿನಿಯರ್ಸ್  ನ ಎಸ್ ಪಿ.ಭಟ್ ಹಾಲ್ ನಲ್ಲಿ  ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಮೈಸೂರು ಇವರ ವತಿಯಿಂದ ಹಮ್ಮಿಕೊಳ್ಳಲಾದ ಗ್ರಾಹಕ ಜಾಗೃತಿ ಕಾರ್ಯಾಗಾರ, ಮೈಸೂರು ಜಿಲ್ಲಾ ಮಟ್ಟದ ಶಾಲಾ ಗ್ರಾಹಕರ ಕ್ಲಬ್,  ಮೈಸೂರು ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಗ್ರಾಹಕ ಸಂರಕ್ಷಣೆ ಅವಶ್ಯಕತೆ ಇದೆಯಾ ಎಂಬುದನ್ನು ಪ್ರಶ್ನೆ ಮಾಡಿಕೊಂಡಾಗ ನಾವು ದಿನನಿತ್ಯದ ಬದುಕಿನಲ್ಲಿ ಅವಶ್ಯಕ ವಸ್ತುಗಳನ್ನು ಅವಲಂಬಿಸಿದ್ದೇವೆ. ಅವಶ್ಯಕ ವಸ್ತುಗಳಿಗೆ ಯಾವುದೇ ಸೇವೆ ಇರಲಿ, ಸರಕು ಇರಲಿ,ಯಾವುದೇ ರಕ್ಷಣೆ ಇರಲಿ ಮೂಲಭೂತವಾದ ಅಂಶಗಳನ್ನು ಭಾರತ ಸರ್ಕಾರದ ಸಂವಿಧಾನದಡಿ ಅಳವಡಿಸಿಕೊಂಡಿದ್ದೇವೆ. ಸಂವಿಧಾನದಲ್ಲಿ ಒಂದು ರಾಷ್ಟ್ರ ಸರ್ವತೋಮುಖ ಅಭಿವೃದ್ಧಿ ಹೊಂದಲು ಏನೆಲ್ಲ ಕ್ರಮವಹಿಸಬೇಕಾಗಿದೆ. ಅದು ರಕ್ಷಣೆ , ಶಿಕ್ಷಣ, ಬೇರೆ ಸವಲತ್ತುಗಳ ಸಮಪಾಲು ಇರಬಹುದು, ಇವೆಲ್ಲವನ್ನೂ ಒಳಗೊಂಡಂತೆ ಸಂವಿಧಾನವನ್ನು ಅಳವಡಿಸಿಕೊಂಡು ಆ ಸಂವಿಧಾನದಲ್ಲಿ ಕಾನೂನು ನಿಯಮಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಇದೆಲ್ಲ ಅಂಶಗಳು ಅಡಕವಾಗಿದೆ ಎಂದರು.

ಗ್ರಾಹಕ ಚಟುವಟಿಕೆಗಳಲ್ಲಿ ಗ್ರಾಹಕ ಹಕ್ಕುಗಳ ಸಂರಕ್ಷಣೆ ಮಾಡಲು ಸರ್ಕಾರ ಹೊರಟಿದೆ ಅವೆಲ್ಲ ಸಂವಿಧಾನದಲ್ಲಿ ಅಡಕವಾಗಿದೆ. ಅಡಕವಾಗದಿರುವುದು ಯಾವುದೂ ಇಲ್ಲ. ಇದರಲ್ಲಿ ಅಡಕವಾಗದಿರುವುದು ಬೇರೆ ಕಡೆ ಬಂದರೂ ಅದಕ್ಕೆ ನಮಾನ್ಯತೆ ಇಲ್ಲ. ಆದರೆ ಸಂವಿಧಾನದಲ್ಲಿ ಒಂದು ಕಾಯಿದೆ ಮಾಡಿದ ಮೇಲೆ ನಮ್ಮ ರಾಷ್ಟ್ರ, ರಾಜ್ಯಗಳು ಅಥವಾ ಒಂದು ಸಂಘ, ಸಂಸ್ಥೆಗಳು ಸಂವಿಧಾನದಡಿ ನಿರೂಪಿತವಾಗಿರುವ ಕಾನೂನು, ಕಟ್ಟಳೆಗಳು ನಿಯಮಗಳು ಒಳಪಟ್ಟಂತೆ ಹಲವಾರು ನಿಯಮಗಳನ್ನು ಆದೇಶದ ರೂಪದಲ್ಲಿ ಜಾರಿ ಮಾಡಿಕೊಂಡಿತ್ತು. ಆದೇಶ ಸಂಸತ್ ಮಾಡಬಹುದು. ಅಥವಾ ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಅಧಿಕಾರ ಹೊಂದಿರುವ ಅಂಶಗಳಿಗೆ ಆದೇಶ ಹೊರಡಿಸಬಹುದು. ಸಂಸತ್ ನಡಿ ಕಾಯಿದೆ ಜಾರಿಗೊಳ್ಳುತ್ತದೆ. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಐಎಂಎ ವಂಚನೆ ವಿಚಾರ ಎಲ್ಲರಿಗೂ ತಿಳಿದಿದೆ. ಅಲ್ಲಲ್ಲಿ ಕೆಲವು ಸಂಸ್ಥೆಗಳು ಅತಿಲಾಭದ ಆಸೆ ಹುಟ್ಟಿಸಿ ಪ್ರಾರಂಭದಲ್ಲಿ ಅವರನ್ನು ವಶೀಕರಣಗೊಳಿಸಿಕೊಂಡು ಹಣ ತೊಡಗಿಸಿ ವಂಚಿಸಿದನ್ನು ನೋಡಿದ್ದೇವೆ. ಇಂತಹ ಪ್ರಕರಣಗಳು ನಮ್ಮ ಕಣ್ಣು ಮುಂದೆ ಇರುವಾಗ , ಗ್ರಾಹಕರು ಯಾವರೀತಿ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂಬುದು ಅತಿ ಅವಶ್ಯಕ ವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಪಾಂಡುರಂಗ, ಇನ್ಸಟಿಟ್ಯೂಟ್ ಆಫ್ ಇಂಜಿನಿಯರ್ಸ್ ಅಧ್ಯಕ್ಷ ಡಾ.ಸುರೇಶ್, ಜೆಎಸ್ ಎಸ್ ಕಾನೂನು ಕಾಲೇಜು ಪ್ರಾಂಶುಪಾಲ ಡಾ.ನಟರಾಜ್ , ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಅಧ್ಯಕ್ಷ ಹೆಚ್.ಆರ್.ಸುಂದರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: