ಮೈಸೂರು

ವೃದ್ಧೆಯೋರ್ವರ ಗಮನ ಬೇರೆಡೆಗೆ ಸೆಳೆದು ಚಿನ್ನಾಭರಣ ದೋಚಿದ ಕಳ್ಳ

ಮೈಸೂರು,ಜು.22:- ವೃದ್ಧೆಯೋರ್ವರ ಗಮನ ಬೇರೆಡೆಗೆ ಸೆಳೆದು ಅವರ ಮೈಮೇಲಿದ್ದ ಚಿನ್ನಾಭರಣವನ್ನು ದುಷ್ಕರ್ಮಿಯೋರ್ವ ಕದ್ದೊಯ್ದ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದಲ್ಲಿ ಗಮನ ಬೇರೆಡೆ ಸೆಳೆದು ವಂಚಿಸುವ ಪ್ರಕರಣ ಮತ್ತೆ ಪುನರಾವರ್ತನೆಯಾಗುತ್ತಿದೆ. ಹೆಚ್.ಡಿ.ಕೋಟೆಯ ಗಂಗರ ಹೊಸಳ್ಳಿಯ ಪುಟ್ಟಮ್ಮ(65)ವಂಚನೆಗೊಳಗಾದವರಾಗಿದ್ದಾರೆ. ಇವರು ಕೆ.ಆರ್.ಆಸ್ಪತ್ರೆಗೆ ಬಂದಿದ್ದರು. ಇವರನ್ನು ವ್ಯಕ್ತಿಯೋರ್ವ ಸರ್ಕಾರದಿಂದ ಹಣ ಕೊಡಿಸುವುದಾಗಿ ಹೇಳಿ ಜೆ.ಕೆ.ಮೈದಾನಕ್ಕೆ ಕರೆದುಕೊಂಡು ಹೋಗಿದ್ದು, ಮೈಮೇಲೆ ಚಿನ್ನಾಭರಣವಿದ್ದರೆ ಹಣ ಕೊಡಲ್ಲ, ಇದಕ್ಕಾಗಿ ನಿಮ್ಮ ಮೈಮೇಲಿದ್ದ ಚಿನ್ನಾಭರಣ ಕಳಚಿಕೊಡಿ ಎಂದಿದ್ದು, ಅದನ್ನು ನಂಬಿದ ಪುಟ್ಟಮ್ಮ ತಮ್ಮ ಮೈಮೇಲಿದ್ದ 42ಗ್ರಾಂನ ಚಿನ್ನಾಭರಣವನ್ನು ಕಳಚಿ ಪುಟ್ಟ ಪೊಟ್ಟಣದಲ್ಲಿ ಸುತ್ತಿ ನೀಡಿದ್ದಾರೆ. ನಂತರ ಪುಟ್ಟಮ್ಮ ಅವರು ಪ್ರಜ್ಞೆ ತಪ್ಪಿದ್ದು, ಪ್ರಜ್ಞೆ ಮರಳಿದಾಗ ಚಿನ್ನಾಭರಣ ಇಲ್ಲದಿರುವುದು ಗೊತ್ತಾಗಿದೆ.

ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: