
ಮೈಸೂರು
ರೇಷ್ಮೆ, ಶ್ರೀಗಂಧ ಉತ್ಪನ್ನಗಳ ತಯಾರಿಕಾ ಘಟಕಗಳಿಗೆ ಭೇಟಿ ನೀಡಿದ ಜಿ.ಎಸ್.ಎಸ್.ಎಸ್. ಕಾಲೇಜು ವಿದ್ಯಾರ್ಥಿಗಳು
ಮೈಸೂರು,ಜು.22:- ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಗೀತಾ ಶಿಶು ಶಿಕ್ಷಣ ಸಂಘದ ಬದರಿಪ್ರಸಾದ್ ಜಿ ಪದವಿ ಪೂರ್ವ ಕಾಲೇಜಿನ ಜ್ಞಾನಮಂಥನ ಸಮಿತಿಯ ವತಿಯಿಂದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಇತ್ತೀಚೆಗೆ ಮೈಸೂರಿನ ಹಿರಿಮೆಗಳನ್ನು ಹೆಚ್ಚಿಸಿರುವ ಮೈಸೂರು ರೇಷ್ಮೆ ಹಾಗೂ ಮೈಸೂರು ಶ್ರೀಗಂಧ ಉತ್ಪನ್ನಗಳ ತಯಾರಿಕಾ ಘಟಕಗಳಿಗೆ ಭೇಟಿ ನೀಡಿದರು.
ಕೈಗಾರಿಕಾ ಭೇಟಿಯೆಂಬುದು ವಿದ್ಯಾರ್ಥಿಗಳಿಗೆ ಬಾಹ್ಯ ಪ್ರಪಂಚದ ಅರಿವನ್ನು ಮೂಡಿಸುವ ಪಠ್ಯೇತರ ಚಟುವಟಿಕೆಯಾಗಿದ್ದು, ರೇಷ್ಮೆ ಹಾಗೂ ಶ್ರೀಗಂಧ ಉತ್ಪನ್ನಗಳ ಉದ್ದಿಮೆಯ ಕುರಿತು ವಿವಿಧ ಹಂತಗಳಲ್ಲಿನ ಕಾರ್ಯಗಳನ್ನು ಕಾರ್ಖಾನೆಯ ಮಾರ್ಗದರ್ಶಕರು ಸವಿವರವಾಗಿ ತಿಳಿಸಿಕೊಟ್ಟರು. ಈ ಬಾರಿಯ ಕೈಗಾರಿಕಾ ಭೇಟಿಯು ವಿದ್ಯಾರ್ಥಿಗಳಿಗೆ ಬುದ್ಧಿಮತ್ತೆಯ ಬೆಳವಣಿಗೆಗೆ ಹಿಡಿದ ಕೈಗನ್ನಡಿಯಾಗಿತ್ತು. (ಎಸ್.ಎಚ್)