ಮನರಂಜನೆ

ರಜಾದಿನಗಳನ್ನು ಮಾಲ್ಡೀವ್ಸ್ ನಲ್ಲಿ ಕಳೆದ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಪುತ್ರಿ ಸುಹಾನಾಖಾನ್ ಫೋಟೋ ವೈರಲ್

ದೇಶ(ನವದೆಹಲಿ)ಜು.22:- ಬಾಲಿವುಡ್ ಸೂಪರ್‌ ಸ್ಟಾರ್ ಶಾರುಖ್ ಖಾನ್ ತಮ್ಮ ಮೂವರು ಮಕ್ಕಳೊಂದಿಗೆ ಮಾಲ್ಡೀವ್ಸ್‌ನಲ್ಲಿ ರಜಾ ಸಮಯವನ್ನು ಕಳೆಯುತ್ತಿದ್ದಾರೆ.

ಈ ವೇಳೆ ಶಾರೂಖ್ ಅವರ ಪತ್ನಿ ಗೌರಿ ಖಾನ್  ತಮ್ಮ ಮಗಳು ಸುಹಾನ್ ಖಾನ್ ಅವರು ಸಹೋದರರಾದ ಅಭಿರಾಮ್ ಮತ್ತು ಆರ್ಯನ್ ರೊಂದಿಗೆ ಇರುವ  ಸುಂದರವಾದ ಚಿತ್ರವನ್ನು  ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಗೌರಿ ಖಾನ್ ಅವರು ಚಿತ್ರಕ್ಕೆ ಸುಂದರವಾದ ಶೀರ್ಷಿಕೆ ನೀಡುವಾಗ, ‘ಮೈ ತ್ರೀ ಲಿಟಲ್’  ಎಂದು ಬರೆದುಕೊಂಡಿದ್ದಾರೆ.  ಕಿಂಗ್ ಖಾನ್ ಮತ್ತು ಗೌರಿ ಅವರ ಮೂವರು ಮಕ್ಕಳ ಮುದ್ದಾದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ಇದರೊಂದಿಗೆ ಶಾರುಖ್ ಖಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಾಲ್ಡೀವ್ಸ್ ನ ಈ ವೀಡಿಯೊವನ್ನು ಹಂಚಿಕೊಂಡ ಶಾರುಖ್ ಖಾನ್ ಅವರು ಮಾಲ್ಡೀವ್ಸ್ ತೊರೆದು ಮರಳಲು ಬೇಸರವಾಗಿದೆ ಎಂದು ಬರೆದಿದ್ದಾರೆ.  ಮಿಸ್ ಯು ಆಲ್ ಎಂದು ಬರೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆಯೇ ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ಮಕ್ಕಳಾದ ಸುಹಾನಾ, ಆರ್ಯನ್ ಮತ್ತು ಅಬ್ರಾಮ್ ಅವರೊಂದಿಗೆ ಮಾಲ್ಡೀವ್ಸ್ನಲ್ಲಿದ್ದರು. ಹಲವು ದಿನಗಳ ಹಿಂದೆಯೇ ಶಾರುಖ್ ಮತ್ತು ಅವರ ಮಕ್ಕಳ ಚಿತ್ರಗಳು ಅಂತರ್ಜಾಲ ತಾಣದಲ್ಲಿ  ಕಂಡು ಬಂದಿತ್ತು.    (ಎಸ್.ಎಚ್)

Leave a Reply

comments

Related Articles

error: