
ಪ್ರಮುಖ ಸುದ್ದಿ
ಚಂದ್ರಯಾನ-2 ಉಡಾವಣೆ : ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ
ದೇಶ(ಆಂಧ್ರ)ಜು.22:- ಭಾರತದ ಬಾಹ್ಯಾಕಾಶ ಕ್ಷೇತ್ರದ ಮಹತ್ವಾಕಾಂಕ್ಷಿ ಮಿಷನ್ ಚಂದ್ರಯಾನ-2 ಉಡಾವಣೆ ಕನಸು ಇಂದು ನನಸಾಗಿದೆ.
ಇಂದು ಮಧ್ಯಾಹ್ನ ಸರಿಯಾಗಿ 2.43 ನಿಮಿಷಕ್ಕೆ ಚಂದ್ರಯಾನ-2 ನೌಕೆಯನ್ನು ಹೊತ್ತ ಬಾಹುಬಲಿ ನಭಕ್ಕೆ ಚಿಮ್ಮಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಜಿಎಸ್ಎಲ್ವಿ ಮಾರ್ಕ್-111 ರಾಕೆಟ್ ಮೂಲಕ ಚಂದ್ರಯಾನ-2 ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ತಮ್ಮ ಕಚೇರಿಯಲ್ಲಿ ಚಂದ್ರಯಾನ-2 ಉಡಾವಣೆಯ ಲೈವ್ ನೋಡುತ್ತಿದ್ದ ಪ್ರಧಾನಿ ಮೋದಿ, ಚಪ್ಪಾಳೆ ತಟ್ಟಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದರು. ಈ ಕುರಿತು ಪ್ರಧಾನಿ ಟ್ವೀಟ್ ಮಾಡಿದ್ದು ‘ನಮ್ಮ ದೇಶದ ವಿಜ್ಞಾನಿಗಳ ಶಕ್ತಿಯನ್ನು ಹಾಗೂ ನವ ಮನ್ವಂತರಕ್ಕೆ ಸಾಗಬೇಕೆಂಬ 130 ಕೋಟಿ ಜನರ ಬದ್ಧತೆ, ದೃಢ ನಿರ್ಧಾರಕ್ಕೆ ಇದು ಸಾಕ್ಷಿಯಾಗಿದೆ. ಇದೊಂದು ಅದ್ಭುತ ಐತಿಹಾಸಿಕ ಕ್ಷಣ. ಚಂದ್ರಯಾನ-2 ಉಡಾವಣೆಯು ನಮ್ಮ ವಿಜ್ಞಾನಿಗಳ ಪರಾಕ್ರಮವನ್ನು ತಿಳಿಸುತ್ತದೆ. ಇಂದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಟ್ಟಿದ್ದಾನೆ’ ಎಂದಿದ್ದಾರೆ. (ಎಸ್.ಎಚ್)