
ಪ್ರಮುಖ ಸುದ್ದಿ
ಮಡಿಕೇರಿ ರೋಟರಿಯಿಂದ ವನಮಹೋತ್ಸವ
ರಾಜ್ಯ(ಮಡಿಕೇರಿ) ಜು.23:- ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ವನಮಹೋತ್ಸದ ಅಂಗವಾಗಿ ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆಯ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡಲಾಯಿತು.
ರಾಜರಾಜೇಶ್ವರಿ ಕಾಲೇಜು, ಸ್ವಾಗತ ಬೆಟ್ಟ ವ್ಯಾಪ್ತಿಯಲ್ಲಿ 200 ಸಸಿಗಳನ್ನು ರೋಟರಿ ಕ್ಲಬ್ವ ವತಿಯಿಂದ ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾ ರೋಟರಿಯ ಮಾಜಿ ಗವನ9ರ್ ಮಾತಂಡ ಸುರೇಶ್ ಚಂಗಪ್ಪ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ರತನ್ ತಮ್ಮಯ್ಯ, ವನಮಹೋತ್ಸವವನ್ನು ಜುಲೈ ತಿಂಗಳಿನಲ್ಲಿ ಎಲ್ಲೆಡೆ ಆಯೋಜಿಸಲಾಗುತ್ತಿದೆ. ಸಮಾಜದ ನಾಗರಿಕರಿಗೆ, ಜಾನುವಾರುಗಳಿಗೆ ಅತ್ಯಗತ್ಯವಾಗಿ ಬೇಕಾಗಿರುವ ನೀರಿನ ಮೂಲವಾದ ಕಾಡನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದ್ದು ಮರಗಳು ಕಡಮೆಯಾಗುತ್ತಿರುವ ಈನ ದಿನಗಳಲ್ಲಿ ಕಾಡು ಗಿಡಗಳನ್ನು ಹೆಚ್ಚು ಹೆಚ್ಚು ನೆಡುವ ಅಗತ್ಯವಾಗಿದೆ ಎಂದು ಹೇಳಿದರು. ಸಸಿಗಳನ್ನು ನೆಡುವ ಮೂಲಕ ವೃಕ್ಷಸಂಕುಲವನ್ನು ಹೆಚ್ಚಿಸುವ ಹೊಣೆಗಾರಿಕೆ ರೋಟರಿಯಂಥ ಸಾಮಾಜಿಕ ಸೇವಾ ಸಂಸ್ಥೆಯ ಮೇಲಿದೆ ಎಂದೂ ರತನ್ ಹೇಳಿದರು.(ಕೆಸಿಐ,ಎಸ್ಎಚ್)