ಪ್ರಮುಖ ಸುದ್ದಿಮೈಸೂರು

ಮೈಸೂರು-ಬೆಂಗಳೂರಿಗೆ ಪಯಣಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ : ‘ಮೆಮು’ ರೈಲಿನಲ್ಲಿ ಕೇವಲ 30 ರೂ.ನಲ್ಲಿ 3 ಗಂಟೆಯೊಳಗೆ ಪ್ರಯಾಣ!

ಮೈಸೂರು,ಜು.23:- ರೈಲು ಮೂಲಕ  ಬೆಂಗಳೂರು-ಮೈಸೂರು, ಮೈಸೂರು-ಬೆಂಗಳೂರಿಗೆ ಪಯಣಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ. ಬೆಂಗಳೂರು-ಮೈಸೂರು ರೈಲು ಮೂಲಕ ತೆರಳುವ ಪ್ರಯಾಣಿಕರು ಇನ್ನು ಮುಂದೆ ಕೇವಲ 30 ರೂಪಾಯಿಯಲ್ಲಿ, 3 ಗಂಟೆಯೊಳಗೆ ಪ್ರಯಾಣಿಸಬಹುದು!

ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಪ್ರಯಾಣಿಕರಿಗೆ ಈ ಸಿಹಿ ಸುದ್ದಿ ನೀಡಿದ್ದಾರೆ.

ತಮ್ಮ ಟ್ವೀಟರ್‌ ಖಾತೆಯಲ್ಲಿ ಹೊಸ ರೈಲು ಸಂಚಾರದ ಕುರಿತು ವಿಷಯ ಪ್ರಸ್ತಾಪಿಸಿದ ಅವರು, ”ಬೆಂಗಳೂರಿನಿಂದ ಮೈಸೂರಿಗೆ ನಿತ್ಯವೂ ಸಂಜೆ 5.20ಕ್ಕೆ ‘ಮೆಮು’ ಎಂಬ ಹೆಸರಿನ ರೈಲು ತೆರಳಲಿದ್ದು, ಪುನಃ ಮೈಸೂರಿನಿಂದ ಅದೇ ರೈಲು 8.30ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ. ಕೇವಲ 30  ರೂ.ನಲ್ಲಿಯೇ 2 ಗಂಟೆ 40 ನಿಮಿಷದಲ್ಲಿ ನಗರಕ್ಕೆ ತಲುಪಬಹುದು ಎಂದು ತಿಳಿಸಿದ್ದಾರೆ.

ಭಾನುವಾರ ಹೊರತುಪಡಿಸಿ ವಾರದ 6 ದಿನವೂ ಈ ರೈಲು ಸಂಚರಿಸಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮುಂದಿನ ವಾರ ಮತ್ತೊಂದು ಹೊಸ ಯೋಜನೆ ಘೋಷಿಸುವುದಾಗಿ ಅವರು ಟ್ವೀಟರ್ ನಲ್ಲಿ ಪ್ರಕಟಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: