ಪ್ರಮುಖ ಸುದ್ದಿ

ವಿಧಾನಸಭಾ ಕಲಾಪ ಆರಂಭ : ಸದನಕ್ಕೆ ಆಡಳಿತ ಪಕ್ಷದ ನಾಯಕರು ಮತ್ತು ಸದಸ್ಯರು ಆಗಮಿಸದ ಹಿನ್ನೆಲೆ ಬಿಜೆಪಿ ನಾಯಕರು ಗರಂ

ರಾಜ್ಯ(ಬೆಂಗಳೂರು)ಜು.23:- ವಿಧಾನಸಭಾ ಕಲಾಪ ಆರಂಭವಾಗಿದ್ದರೂ ಸದನಕ್ಕೆ ಆಡಳಿತ ಪಕ್ಷದ ನಾಯಕರು ಮತ್ತು ಸದಸ್ಯರು ಆಗಮಿಸದ ಹಿನ್ನೆಲೆ ಬಿಜೆಪಿ ನಾಯಕರು ಗರಂ ಆದರು.

ವಿಧಾನಸಭೆ ಕಲಾಪಕ್ಕೆ ಕಾಂಗ್ರೆಸ್ ಸದಸ್ಯರು ಇನ್ನು ಆಗಮಿಸಿಲ್ಲ. ಜೆಡಿಎಸ್ ನ ಬೆರಳೆಣಿಕೆ ಸದಸ್ಯರು ಆಗಮಿಸಿದ್ದಾರೆ. ಹೀಗಾಗಿ ಈ ವೇಳೆ ಆಡಳಿತ ಪಕ್ಷದ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ಕಿಡಿಕಾರಿದರು.  ನೀವು ಜನರಲ್ಲಿ ಕ್ರೆಡಿಬಿಲಿಟಿ ಕಳೆದುಕೊಳ್ಳುತ್ತೀರಿ. ನಿಮ್ಮನ್ನು ನೀವೆ ಉದ್ಧಾರ ಮಾಡಿಕೊಳ್ಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು. ಪ್ರಿಯಾಂಕ್ ಖರ್ಗೆ ಮನವಿ ಕುರಿತು ಗರಂ ಆದ ವಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ,  ಆಡಳಿತ ಪಕ್ಷದಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ.  ನೀವೇ ಏಕೆ ಬೆತ್ತಲೆ ಮಾಡಿಕೊಳ್ಳಲು ಹೋಗ್ತೀರಿ. ನಿನ್ನೆ ಏಕೆ ಪ್ರತಿಭಟನೆ ನಡೆಸಿದ್ರೂ ಗೊತ್ತಿಲ್ಲ ಎಂದು ಹರಿಹಾಯ್ದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ಸದನವನ್ನು ಆಡಳಿತ ಪಕ್ಷದವರು ತುಂಬಾ ಹಗುರವಾಗಿ ತೆಗೆದುಕೊಂಡಿದ್ದಾರೆ. ಆಡಳಿತ ಪಕ್ಷಕ್ಕೆ ವಿಶ್ವಾಸಮತ ಯಾಚಿಸುವುದಕ್ಕೆ ಆಸಕ್ತಿ ಇಲ್ಲ ಎಂದು ಕಿಡಿಕಾರಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: