ಮೈಸೂರು

ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿದ್ದು ಬೆರಳ ತುದಿಯಲ್ಲಿ ಎಲ್ಲವೂ ಲಭ್ಯ : ಪ್ರೊ.ಪಿ.ವೆಂಕಟರಾಮಯ್ಯ

ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿದ್ದು, ಪ್ರತಿಯೊಂದು ಮಾಹಿತಿಯು ಬೆರಳ ತುದಿಯಲ್ಲೇ ಲಭ್ಯವಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ತಿಳಿಸಿದ್ದಾರೆ.

ಮೈಸೂರಿನ ಬನ್ನಿಮಂಟಪದಲ್ಲಿರುವ ಸೆಂಟ್ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಭಾಂಗಣದಲ್ಲಿ ದೆಹಲಿ, ಅಲಹಾಬಾದ್ ಹಾಗೂ ಬೆಂಗಳೂರಿನ ಭಾರತದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಸಹಕಾರದಲ್ಲಿ ಆಯೋಜಿಸಿರುವ ಪ್ರಾಯೋಗಿಕ ಭೌತಶಾಸ್ತ್ರದಲ್ಲಿ ಸ್ಮರಣೆ ಕುರಿತ 16ದಿನಗಳ ಶಿಬಿರವನ್ನು ಗುರುವಾರ ಪ್ರೊ.ಪಿ.ವೆಂಕಟರಾಮಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ  ಅವರು  ತಂತ್ರಜ್ಞಾನದ ಬೆಳವಣಿಗೆಯಿಂದ ಅಮೇರಿಕಾದಲ್ಲಿ ದೊರೆಯುವಂತಹ ಗುಣಮಟ್ಟದ ಶಿಕ್ಷಣವನ್ನು ಸಹ ಕುಳಿತಲ್ಲಿಯೇ ಪಡೆದುಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ  ಕಾಲೇಜು ವ್ಯವಸ್ಥಾಪಕ ಫಾದರ್ ಲೆಸ್ಲೀ ಮೋರಸ್, ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಪ್ರೊ.ಡಿ.ರೇವಣ್ಣ ಸಿದ್ದಯ್ಯ, ಸಂಚಾಲಕ ಪ್ರೊ.ಆರ್.ಶ್ರೀನಿವಾಸನ್,  ಸೆಂಟ್ ಫಿಲೋಮಿನಾ ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: