ಮೈಸೂರು

ಅರಮನೆಯನ್ನು ನಿತ್ಯ ಅರ್ಧಗಂಟೆಯಾದರೂ ವಿದ್ಯುದ್ದೀಪಗಳಿಂದ ಅಲಂಕರಿಸಲು ಸಲಹೆ

ಮೈಸೂರು ಜಿಲ್ಲೆಗೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಹೆಚ್ಚು ದಿನ ನಗರದಲ್ಲಿ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್ ನೇತೃತ್ವದಲ್ಲಿ ಪ್ರವಾಸೋದ್ಯಮ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಮಾಲೋಚನಾ ಸಭೆ ನಡೆಸಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಡಿ.ರಂದೀಪ್ ಮಾತನಾಡಿ ಜಿಲ್ಲೆಯಲ್ಲಿ ಶೇ.50ರಷ್ಟು ಪ್ರವಾಸೋದ್ಯಮವನ್ನು ಮಾತ್ರ ಪ್ರಚುರಪಡಿಸಲಾಗಿದೆ. ಶೇ.100ಕ್ಕೆ ಹೆಚ್ಚಿಸಲು ಪ್ರಯತ್ನ ನಡೆಸಬೇಕು. ಕೇವಲ ಸರ್ಕಾರದ ಅನುದಾನ ಸಾಕಾಗಲ್ಲ. ಎಲ್ಲರ ಮಾರ್ಗದರ್ಶ, ಸಲಹೆ, ಸಹಕಾರ ಅಗತ್ಯ ಎಂದರು.

ಸಭೆಯಲ್ಲಿ ಮೃಗಾಲಯ ಮತ್ತು ಅರಮನೆ ವೀಕ್ಷಣೆಯ ಸಮಯ ವಿಸ್ತರಿಸಿ, ಸಂಜೆಯ ವೇಳೆ ನಿತ್ಯ ಪೊಲೀಸ್ ಬ್ಯಾಂಡ್ ನುಡಿಸಿ, ಅರಮನೆಯನ್ನು ನಿತ್ಯ ಅರ್ಧಗಂಟೆಯಾದರೂ ವಿದ್ಯುದ್ದೀಪಗಳಿಂದ ಅಲಂಕರಿಸಿ ಎಂಬಿತ್ಯಾದಿ ಸಲಹೆಗಳು ಕೇಳಿಬಂದವು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ವಾರಕ್ಕೊಮ್ಮೆ ಪೊಲೀಸ್ ಬ್ಯಾಮಡ್ ನುಡುಸಲು ವ್ಯವಸ್ಥೆ ಮಾಡಲಾಗುವುದು. ಪ್ರವಾಸಿಗರ ಬೇಡಿಕೆಗೆ ತಕ್ಕಂತೆ ಅರಮನೆಯನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜನಾರ್ದನ್, ಜೆ.ಜಗದೀಶ್, ಐಎಎಸ್ ಅಧಿಕಾರಿ ಅರುಣಾಂಶುಗಿರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: