ಮೈಸೂರು

ತ್ಯಾಜ್ಯ ಕಟ್ಟಡ ಅವಶೇಷ ನಿರ್ವಹಣೆಗೆ ಡಿ.ರಂದೀಪ್ ಸೂಚನೆ

ಮೈಸೂರು ಮಹಾನಗರಪಾಲಿಕೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಬಡಾವಣೆಗಳಲ್ಲಿ ಘನತ್ಯಾಜ್ಯ ರಾಶಿ ಹಾಗೂ ಕಟ್ಟಡ ಅವಶೇಷ ಹಾಗೂ ಫ್ಲೆಕ್ಸ್ ಗಳ ಹಾವಳಿ ನಿಯಂತ್ರಣ ಕುರಿತು  ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಮಾಲೋಚನಾ ಸಭೆ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಡಾ ವ್ಯಾಪ್ತಿಯಲ್ಲಿನ ತ್ಯಾಜ್ಯಗಳ ಸಮಸ್ಯೆ ನಿವಾರಿಸಲು ಪಾಲಿಕೆ ಹಾಗೂ ಮುಡಾ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಸೂಚನೆ ನೀಡಿದರು. ಪಾಲಿಕೆ ವ್ಯಾಪ್ತಿಯ ಉದ್ಯಾನಗಳ ನಿರ್ವಹಣೆಗಾಗಿ ದತ್ತು ನೀಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಪಾಲಿಕೆ ವ್ಯಾಪ್ತಿಯಲ್ಲಿ 410 ಉದ್ಯಾನಗಳಿದ್ದು, ಅದರಲ್ಲಿ 289 ನೋಟಿಫೈ ಆಗಿವೆ. ಉಳಿದವುಗಳನ್ನು ನೋಟಿಫೈಗಾಗಿ ಕಳುಹಿಸಬೇಕಿದೆ. 84ಉದ್ಯಾನಗಳನ್ನು ಪಾಲಿಕೆ ನಿರ್ವಹಣೆ ಮಾಡುತ್ತಿದೆ. ಉಳಿದವುಗಳು ಸರಿಯಾಗಿ ನಿರ್ವಹಣೆಯಾಗದ ಕಾರಣ ದತ್ತು ನೀಡಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಜೆ.ಜಗದೀಶ್ ಸಭೆಗೆ ತಿಳಿಸಿದರು.

ಸಭೆಯಲ್ಲಿ ಮುಡಾ ಆಯುಕ್ತ ಎಂ.ಮಹೇಶ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಯತೀಶ್, ಲಿಂಗರಾಜು, ಗೀತಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: