ಮೈಸೂರು

ಇಂಜಿನಿಯರಿಂಗ್ ಕ್ಷೇತ್ರದ ನಿರೀಕ್ಷೆಗೆ ತಕ್ಕಂತೆ ಜ್ಞಾನವೃದ್ಧಿಸಿಕೊಳ್ಳಿ : ಡಾ.ಎಲ್. ಬಸವರಾಜು

ಮೈಸೂರಿನ  ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಕ್ಯಾಡ್‍ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಈಚೆಗೆ ಸಹಿ ಹಾಕಲಾಯಿತು.

ಪ್ರಾಂಶುಪಾಲ ಡಾ.ಎಲ್.ಬಸವರಾಜು ಮಾತನಾಡಿ ಕಾಲೇಜಿನಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಒದಗಿಸಿರುವ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಜ್ಞಾನವೃದ್ಧಿಸಿಕೊಳ್ಳಿ, ಇಂಜಿನಿಯರಿಂಗ್ ಕ್ಷೇತ್ರದ ನಿರೀಕ್ಷೆಗೆ ತಕ್ಕಂತೆ ಸಮರ್ಥರಾಗಿ ಎಂದು ಹಾರೈಸಿದರು.

ಕಾಲೇಜಿನ ಮೆಕಾನಿಕಲ್ ವಿಭಾಗದ ವಿದ್ಯಾರ್ಥಿಗಳಿಗಾಗಿ ಕ್ಯಾಡ್‍ ಸಂಸ್ಥೆಯೊಂದಿಗೆ ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ತರಬೇತಿಯಲ್ಲಿ ರಾಷ್ಟ್ರೀಯ ಸಂಸ್ಥೆಯ ಮುಖ್ಯಸ್ಥ ಬಿ.ಆರ್.ರಾಮ ಮಾತನಾಡಿ ಕಂಪ್ಯೂಟರ್ ಜ್ಞಾನ ಪ್ರತಿಯೊಂದು ಕ್ಷೇತ್ರದಲ್ಲಿ ಅತಿ ಅವಶ‍್ಯವಾಗಿದ್ದು ಸಾಫ್ಟ್ ವೇರ್ ರೂಪಿಸಲು ಹಾಗೂ ವಿವಿಧ ವಿನ್ಯಾಸಗಳನ್ನು ರೂಪಿಸಲು ಸಹಾಯಕವಾಗುವುದು ಎಂದರು.

ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಡಾ.ರತ್ನಾಕರ್, ರೋಹಿತ್ ಎಸ್, ಕ್ಯಾಡ್ ಸಂಸ್ಥೆಯ ವಿದ್ಯಾಶಂಕರ್, ಸಾರ್ವಜನಿಕ ಸಂಪರ್ಕಾಧಿಕಾರಿ ಚಂದ್ರಶೇಖರ್, ಉಪನ್ಯಾಸಕ ಹಾಗೂ ಸಿಬ್ಬಂದಿ ವರ್ಗ ಸಂದರ್ಭಕ್ಕೆ ಸಾಕ್ಷಿಯಾದರು.

Leave a Reply

comments

Related Articles

error: