ಮೈಸೂರು

ಅಕ್ರಮವಾಗಿ ಸಂಗ್ರಹಿಸಿ ಸಾಗಿಸುತ್ತಿದ್ದ 10 ಕ್ವಿಂಟಲ್ ಅನ್ನ ಭಾಗ್ಯ ಅಕ್ಕಿ ಮತ್ತು ಮಾರುತಿ ವ್ಯಾನ್ ವಶ : ಓರ್ವನ ಬಂಧನ

ಮೈಸೂರು,ಜು.24:- 23-07-2019 ರಂದು ಸಿಸಿಬಿ ಪೊಲೀಸರು ಮಾಹಿತಿ ಮೇರೆಗೆ ಮಂಡಿ ಪೊಲೀಸ್ ಠಾಣಾ ಸರಹದ್ದಿನ ಲಷ್ಕರ್ ಮೊಹಲ್ಲಾದ ಅಶೋಕ ರಸ್ತೆಯ 15ನೇ ವೆಸ್ಟ್ ಕ್ರಾಸ್‍ನಲ್ಲಿ ಧಾಳಿ ನಡೆಸಿ, ಬಡ ಜನರಿಗೆ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ ನೀಡುವ ಅಕ್ಕಿಯನ್ನು  ಅಕ್ರಮವಾಗಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಮಾರುತಿ ಓಮಿನಿ ವಾಹನದಲ್ಲಿ ಸಾಗಾಣೆ ಮಾಡುತ್ತಿದ್ದ  ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ತಬ್ರೀಜ್ .ಕೆ ಬಿನ್ ಕಲೀಂವುಲ್ಲಾ ಖಾನ್, (30), ಗೌಸಿಯಾ ನಗರ, ಮೈಸೂರು ಎಂದು ಗುರುತಿಸಲಾಗಿದ್ದು, ಈತನನ್ನು ವಶಕ್ಕೆ ಪಡೆದು, ಮಾರುತಿ ಓಮಿನಿ ವಾಹನದಲ್ಲಿದ್ದ 10 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ, ಕೃತ್ಯಕ್ಕೆ ಬಳಸಿದ್ದ ಮಾರುತಿ ಓಮಿನಿ ವಾಹನ ಮತ್ತು  ತೂಕದ ಯಂತ್ರವನ್ನು ವಶಪಡಿಸಿಕೊಂಡಿರುತ್ತಾರೆ.  ಈ ಸಂಬಂಧ  ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ದಾಳಿ ಕಾರ್ಯವನ್ನು ಸಿ.ಸಿ.ಬಿ. ಘಟಕದ ಎ.ಸಿ.ಪಿ.  ಬಿ.ಆರ್. ಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ, ಸಿ.ಸಿ.ಬಿ.ಯ ಪೊಲೀಸ್ ಇನ್ಸಪೆಕ್ಟರ್ ಎ. ಮಲ್ಲೇಶ್, ಆಹಾರ ನಿರೀಕ್ಷಕರಾದ   ಟಿ.ಜೆ. ಲಕ್ಷ್ಮಿ, ಸಿ.ಸಿ.ಬಿ.ಯ ಸಿಬ್ಬಂದಿಗಳಾದ ಶ್ರೀನಿವಾಸ್ ಪ್ರಸಾದ್, ದೀಪಕ್, ಜೋಸೆಫ್ ನರೋನ,  ರಘು, ಶ್ರೀನಿವಾಸ್ ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: