ಮೈಸೂರು

ಮೈಸೂರು ಮೃಗಾಲಯದಲ್ಲಿ ಜಾಗ್ವಾರ್ ದತ್ತು ಪಡೆದ ದ್ರುವ್ ಕಾಂಪ್ಯೂಸಾಫ್ಟ್ ಕನ್ಸಟೆನ್ಸಿ ಪ್ರೈವೇಟ್ ಲಿಮಿಟೆಡ್

ಮೈಸೂರು,ಜು.24:- ದ್ರುವ್ ಕಾಂಪ್ಯೂಸಾಫ್ಟ್ ಕನ್ಸಟೆನ್ಸಿ ಪ್ರೈವೇಟ್ ಲಿಮಿಟೆಡ್ ಅವರು ಮೈಸೂರು ಮೃಗಾಲಯದಲ್ಲಿರುವ ಜಾಗ್ವಾರ್ ನ್ನು 35,000ರೂ.ಪಾವತಿಸಿ  ದತ್ತು ಸ್ವೀಕರಿಸಿದ್ದಾರೆ.

ಒಂದು ವರ್ಷದ ಅವಧಿಯ ಮೇರೆಗೆ ದತ್ತು ಸ್ವೀಕರಿಸಿದ್ದು, ಮೈಸೂರು ಮೃಗಾಲಯದ ಮುಖ್ಯ ಧ್ಯೇಯೋದ್ಧೇಶವಾದ ಪ್ರಾಣಿ ಸಂರಕ್ಷಣೆಯಂತಹ ಮಹತ್ಕಾರ್ಯದಲ್ಲಿ ತಮ್ಮ ಕೈಜೋಡಿಸುವ ಮೂಲಕ ಉನ್ನತ ಮಟ್ಟದ ಕೊಡುಗೆಯನ್ನು ನೀಡಿರುವ ಅವರಿಗೆ ಶ್ರೀಜಯಚಾಮರಾಜೇಂದ್ರ ಮೃಗಾಲಯವು ವಂದಿಸಿದೆ. ಪ್ರಾಣಿ ಸಂರಕ್ಷಣೆಯ ಸತ್ಕಾರ್ಯಕ್ಕೆ ಅವರು ನೀಡಿರುವ ಮಹತ್ತರ ಬೆಂಬಲ ಇದಾಗಿದ್ದು, ಅವರ ಈ ಕಾರ್ಯ ಇತರೆ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳು ಸ್ವತಃ ಮುಂದೆ ಬಂದು ನಮ್ಮ ಪ್ರಾಣಿ ಸಂರಕ್ಷಣೆಯ ಮಹತ್ಕಾರ್ಯದಲ್ಲಿ ಭಾಗಿಯಾಗಲು ಪ್ರೇರಕವಾಗಿದೆ. ಪ್ರಾಣಿಗಳ ಸಂರಕ್ಷಣೆಯ ಜಂಟಿ ಪ್ರಯತ್ನದ ಯೋಜನೆಗೆ ಇದೇ ರೀತಿಯ ಬೆಂಬಲ ಸಹಕಾರವನ್ನು ಮುಂದುವರಿಸುವಂತೆ ಮೃಗಾಲಯ ಕೋರಿದ್ದು, ಮೃಗಾಲಯ ಪ್ರಾಣಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅವುಗಳ ಸಂರಕ್ಷಣೆಗೆ ವಿಶೇಷ ಒಲವಿನಿಂದ ತಮ್ಮ ಬೆಂಬಲವನ್ನು ನೀಡಿರುವ ದ್ರುವ್ ಕಾಂಪ್ಯೂಸಾಫ್ಟ್ ಕನ್ಸಟೆನ್ಸಿ ಪ್ರೈವೇಟ್ ಲಿಮಿಟೆಡ್ ಗೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಅಭಿನಂದನೆಯನ್ನು ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: