ಪ್ರಮುಖ ಸುದ್ದಿಮೈಸೂರು

ಇನ್ನೆರಡು ದಿನಗಳಲ್ಲಿ ಅಧಿಕಾರದ ಗದ್ದುಗೆ ಏರಲಿದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಡೆ ? : ಸಂಪುಟದಲ್ಲಿ ಮೈಸೂರು ಭಾಗದ ಯಾವ ನಾಯಕನಿಗೆ ಸಿಗಲಿದೆ ಮಾನ್ಯತೆ

ಮೈಸೂರು,ಜು.24:- ಕೊನೆಗೂ 7ನೇ ಬಾರಿಯ ಆಪರೇಷನ್ ಕಮಲದಲ್ಲಿ  ಯಶಸ್ಸು ಕಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಡೆ ಇನ್ನೆರಡು ದಿನಗಳಲ್ಲಿ ಅಧಿಕಾರದ ಗದ್ದುಗೆ ಏರಲಿದೆ ಎನ್ನಲಾಗುತ್ತಿದೆ.

ಇನ್ನೆರಡು ದಿನಗಳಲ್ಲಿ  ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ  ಸ್ವೀಕರಿಸಲಿದ್ದು, ಯಡಿಯೂರಪ್ಪ ಸಂಪುಟದಲ್ಲಿ ಯಾರು ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲ ಮೂಡಿಸಿದೆ. ಅತೃಪ್ತ ಶಾಸಕ ಹೆಚ್ ವಿಶ್ವನಾಥ್ ಸೇರಿದಂತೆ ಇತರೆ ಅತೃಪ್ತರಿಗೂ ಸ್ಥಾನಮಾನ  ಸಿಗಲಿದ್ಯಾ ಎಂಬ ಪ್ರಶ್ನೆ ಎದ್ದಿದ್ದು,  ಯಡಿಯೂರಪ್ಪ ಸಂಪುಟದಲ್ಲಿ ಮೈಸೂರು ಭಾಗದ ಯಾವ ನಾಯಕನಿಗೆ ಮಾನ್ಯತೆ  ಸಿಗಲಿದೆ  ಎಂಬ ಕುತೂಹಲ ಮೈಸೂರಿಗರಲ್ಲಿದೆ.  ಮೈಸೂರು ಭಾಗದ ಬಿಜೆಪಿ ಶಾಸಕರಲ್ಲಿ  ಕೆ .ಆರ್ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್ ಮುಂಚೂಣಿಯಲ್ಲಿದ್ದು,  ವಿಶ್ವನಾಥ್ ಬಿಜೆಪಿ ಸೇರಿದ್ರೆ  ಸಚಿವ  ಸ್ಥಾನದ ಹಾದಿ ರಾಮದಾಸ್ ಗೆ ಕಠಿಣವಾಗಲಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ  ಎಸ್.ಎ ರಾಮದಾಸ್  ಹೆಗಲೇರಲಿದೆ ಎನ್ನಲಾಗುತ್ತಿದ್ದು, ಈ ಹಿಂದೆಯೂ ಯಡಿಯೂರಪ್ಪ ಆಳ್ವಿಕೆಯಲ್ಲಿ ರಾಮದಾಸ್ ಸಚಿವರಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: