ಮೈಸೂರು

ಪರೀಕ್ಷೆ ಬರೆಯಲು ಅವಕಾಶ

ಮೈಸೂರು ವಿಶ್ವವಿದ್ಯಾಲಯದ ವಿವಿಧ ಕೋರ್ಸ್ ಗಳ ಎರಡುಪಟ್ಟು ಅವಧಿ ಮುಗಿದ ನಂತರವೂ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆ ಬರೆಯಲು ಅಂತಿಮ ಅವಕಾಶ ಕಲ್ಪಿಸಲಾಗಿದೆ.

ಎಲ್ಲ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪದ್ಧತಿಯ ಕೋರ್ಸ್ ಗಳು, ಡಿಪ್ಲೋಮಾ ಸ್ನಾತಕೋತ್ತರ ಕೋರ್ಸ್ ಗಳಿಗೆ ಅನ್ವಯವಾಗುವಂತೆ ಎರಡುಪಟ್ಟು ಅವಧಿ ನಂತರವೂ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಳೆ ಪಠ್ಯಕ್ರಮದ ರೀತಿಯಲ್ಲೇ ಪ್ರಸ್ತುತ  ಶೈಕ್ಷಣಿಕ ಸಾಲಿನಿಂದಲೇ ಅನ್ವಯಿಸುವಂತೆ ಒಂದು ವರ್ಷದ ಅವಧಿಗೆ ಅನುಮತಿ ನೀಡಲಾಗಿದೆ. ಬಿಇಡಿ ಹಾಗೂ ಕಾನೂನು ಪದವಿ ವಿದ್ಯಾರ್ಥಿಗಳಿಗೆ ಜುಲೈ 2017ರಲ್ಲಿ ನಡೆಯುವ ಪರೀಕ್ಷೆಗೆ ಒಂದು ಕಾಲಾವಕಾಶ ಮತ್ತು ಇತರ ಸೆಮಿಸ್ಟರ್ ಮಾದರಿಯ 2,4 ಹಾಗೂ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 2017ರ ಮೇ, ಜೂನ್ ತಿಂಗಳಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. 1, 3, 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ವಾರ್ಷಿಕ ಪದ್ಧತಿ ಕೋರ್ಸ್ ಗಳಿಗೆ ಮೇ, ಜೂನ್ ತಿಂಗಳಲ್ಲಿ ಪರೀಕ್ಷೆ ಬರೆಯಬಹುದು. ಈ ಅವಕಾಶವನ್ನು  ಪ್ರಸ್ತುತ ನಡೆಸುವ ಪರೀಕ್ಷೆಗಳಿಗೆ ಆಯಾ ಸ್ಕೀಂಗಳಿಗೆ ಮುಕ್ತಾಯವಾಗುವ ಹಂತದಲ್ಲಿ ಬೋಧಿಸಲಾಗುತ್ತಿದ್ದ ಪಠ್ಯಕ್ರಮ ಅನುಸರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ ಎಂದು ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ.

Leave a Reply

comments

Related Articles

error: