ಮೈಸೂರು

ಸಾಲ ತೀರಿಸಲಾಗದೇ ಇಂಜಿನಿಯರ್ ಆತ್ಮಹತ್ಯೆ

ವಿಪರೀತ ಸಾಲ ಮಾಡಿದ್ದ ಸಿವಿಲ್ ಇಂಜಿನಿಯರ್ ಓರ್ವ ಅದನ್ನು ಭರಿಸಲಾಗದೆ ನೇಣಿಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತನನ್ನು ಶ್ರೀರಾಂಪುರದ ಎರಡನೇ ಹಂತದಲ್ಲಿ ವಾಸವಿದ್ದ ನವೀನ್ (30) ಎಂದು ಗುರುತಿಸಲಾಗಿದೆ. ನವೀನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ವಿಪರೀತ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿದ್ದ ಈತ ಸಾಲ ಮರುಪಾವತಿಸಲಾಗದೇ ತತ್ತರಿಸಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾನೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: