ಮೈಸೂರು

ಸಂಚಾರ ನಿಯಮ ಉಲ್ಲಂಘನೆ ತಪಾಸಣೆ : ಸಬ್ ಇನ್ಸಪೆಕ್ಟರ್ ಗೆ ಡಿಕ್ಕಿ ಹೊಡೆದು ರಿಕ್ಷಾ ಚಾಲಕ ಪರಾರಿ

ಮೈಸೂರು,ಜು.25:- ಸಂಚಾರ ನಿಯಮ ಉಲ್ಲಂಘನೆ ಕುರಿತು ತಪಾಸಣೆ ನಡೆಸುತ್ತಿದ್ದ ವೇಳೆ ರಿಕ್ಷಾ ಚಾಲಕನೋರ್ವ ದೇವರಾಜ ಸಂಚಾರ ಠಾಣೆಯ ಸಬ್ ಇನ್ಸಪೆಕ್ಟರ್ ಓರ್ವರಿಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ ಘಟನೆ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ನಡೆದಿದೆ.

ದೇವರಾಜ ಸಂಚಾರ ಠಾಣೆಯ ಸಬ್ ಇನ್ಸಪೆಕ್ಟರ್  ವಿಶ್ವನಾಥ ಅವರು ಸಂಚಾರ ನಿಯಮ ಉಲ್ಲಂಘನೆ ಕುರಿತು ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಸಮವಸ್ತ್ರ ಧರಿಸದೇ ಬಂದ ರಿಕ್ಷಾ ಚಾಲಕ ಮುದಾಸಿರ್ ಎಂಬಾತನನ್ನು ತಡೆದು ನಿಲ್ಲಲು ಸೂಚನೆ ನೀಡಿದ್ದಾರೆ. ಆದರೆ ಆತ ರಿಕ್ಷಾ ನಿಲ್ಲಿಸದೇ ರಸ್ತೆಯಲ್ಲಿ ನಿಂತಿದ್ದ ವಿಶ್ವನಾಥ್ ಅವರಿಗೆ ಡಿಕ್ಕಿ ಹೊಡೆದು ಹೋಗಿದ್ದು, ಘಟನೆಯಲ್ಲಿ ವಿಶ್ವನಾಥ್ ಗಾಯಗೊಂಡಿದ್ದಾರೆ. ವಿಶ್ವನಾಥ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುದಾಸಿರ್ ವಿರುದ್ಧ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: