ಮೈಸೂರು

ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಗುಜರಿಯ ಏಳು ಮಳಿಗೆ ಮಾಲೀಕರ ವಿರುದ್ಧ ದೂರು

ಮೈಸೂರು,ಜು.25:- ಕಾನೂನು ಬಾಹಿರವಾಗಿ ಏಳು ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಗುಜರಿಯ ಏಳು ಮಳಿಗೆ ಮಾಲೀಕರ ವಿರುದ್ಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಖೀಲ್ ಚಂದ್ರ, ಹಿರಿಯ ಕಾರ್ಮಿಕ ನಿರೀಕ್ಷಕ ನಿಖಿಲ್ ಚಂದ್ರ ಎಂಬವರೇ ದೂರು ನೀಡಿದವರಾಗಿದ್ದಾರೆ.   23/07/19ರಂದು ಅಪರೇಷನ್ ಮುಸ್ಕಾನ್ 2019 ರ ಕಾರ್ಯಾಚರಣೆ ಸಂಬಂಧ ಮೈಸೂರು ನಗರ ವಿಶೇಷ ಪೊಲೀಸ್ ಘಟಕ ಲಷ್ಕರ್ ಪೊಲೀಸ್ ಠಾಣೆ, ಸಿಸಿಬಿ ಚೈಲ್ಡ್ ಲೈನ್ -1098, ಜಿಲ್ಲಾ ಮಕ್ಕಳ ರಕ್ಷಣ ಘಟಕ ಹಾಗೂ ಕಾರ್ಮಿಕ ಇಲಾಖೆ ಯವರ ಸಹಯೋಗದಲ್ಲಿ ಬೆಳಿಗ್ಗೆ 11-50 ರಿಂದ 12-30 ರವರೆಗೆ ಹೊಸ ಗುಜರಿ (ದೊಡ್ಡ ಗುಜರಿ ) ಲಷ್ಕರ್ ಮೊಹಲ್ಲಾ, ಮೈಸೂರು ಇಲ್ಲಿ ಮಕ್ಕಳ ರಕ್ಷಣ ಕಾರ್ಯಾಚರಣೆ ನಡೆಸಿದ್ದು, ಪರಿಶೀಲಿಸುವ ಸಂದರ್ಭದಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ(ನಿಷೇಧ ಮತ್ತು ನಿಯಂತ್ರಣ ) ಕಾಯ್ದೆ 1986 ತಿದ್ದುಪಡಿ ಕಾಯ್ದೆ 2016 ಕಲಂ 3 ಮತ್ತು 3(ಎ) ರನ್ನು ಉಲ್ಲಂಘಿಸಿ ಸುಮಾರು 07 ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಂಡಿರುವುದು ಕಂಡು ಬಂದಿದೆ. ಅವರನ್ನು ರಕ್ಷಣೆ ಮಾಡಿ ಕಲ್ಯಾಣ ಸಮಿತಿ ಮೈಸೂರು ಜಿಲ್ಲೆ ಅವರ ಮುಂದೆ ಹಾಜರು ಪಡಿಸಿ ಪುನರ್ವಸತಿ ಕಲ್ಪಿಸಿದ್ದು, ಈ ಬಾಲಕರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಅಂಗಡಿ ಸಂ.16, 74, 10, 85, 69, 92 ಮತ್ತು 02 ರ ಮಾಲೀಕರುಗಳಾದ ಸೈಯದ್ ಫರ್ಹಾನ್, ನೂರ್, ಘಿರೀಫ್, ನಾಜೀಂ, ಮುಸ್ತಾಫಾ, ಅಜ್ಜು & ನೂರ್ ಮೊಹಮ್ಮದ್ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ  ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: