ಪ್ರಮುಖ ಸುದ್ದಿ

ರಕ್ತದಾನ ಮಾಡುವ ಮೂಲಕ ಆರೋಗ್ಯ ಕ್ಷೀಣಿಸಿದ ಶ್ವಾನಕ್ಕೆ ಜೀವದಾನ ಮಾಡಿದ ಜರ್ಮನ್ ಶೆಫರ್ಡ್ !

ದೇಶ(ನವದೆಹಲಿ)ಜು.25:- ಮನುಷ್ಯರು ಮತ್ತೊಂದು ಮನುಷ್ಯನ ಪ್ರಾಣವನ್ನು ಉಳಿಸಲು ರಕ್ತದಾನ ಮಾಡುವುದನ್ನು ಕೇಳಿದ್ದೇವೆ. ನೋಡಿದ್ದೇವೆ. ಆದರೆ ಇಲ್ಲೊಂದು ಶ್ವಾನ ಕೂಡ ರಕ್ತದಾನ ಮಾಡಿದೆ.

ನರಸಿಂಹಪುರದಲ್ಲಿ ಒಂದು ತಿಂಗಳಿನಿಂದ ಆರೋಗ್ಯ ಹದಗೆಟ್ಟಿದ್ದ ಜರ್ಮನ್ ಶೆಫರ್ಡ್ ತಳಿಯ ಶ್ವಾನವೊಂದಕ್ಕೆ ಅದೇ ತಳಿಯ ಶ್ವಾನವೊಂದು ರಕ್ತ ನೀಡುವ ಮೂಲಕ ಪ್ರಾಣ ಉಳಿಸಿದೆ.

ಈ ಕುರಿತು ಪಶುಚಿಕಿತ್ಸಕರು ಮಾಹಿತಿ ನೀಡಿದ್ದು,ಇದು ಜಿಲ್ಲೆಯಲ್ಲೇ ಮೊದಲು. ಶ್ವಾನಕ್ಕೆ ರಕ್ತದ ಕೊರತೆಯಿತ್ತು. ಆಹಾರ ಮತ್ತು ನೀರಿನ ಪ್ರಮಾಣವೂ ಕಡಿಮೆಯಾಗಿತ್ತು. ಇದೇ ಕಾರಣಕ್ಕೆ ಇದೇ ತಳಿಯ ಇನ್ನೊಂದು ಶ್ವಾನದಿಂದ ರಕ್ತ ತೆಗೆದುಕೊಂಡು ಆರೋಗ್ಯ ಹದಗೆಟ್ಟ ಶ್ವಾನದ ಶರೀರಕ್ಕೆ ಹರಿಸಲಾಗಿದೆ. ರಕ್ತ ತೆಗೆದ ಕೆಲವೇ ಕ್ಷಣಗಳಲ್ಲಿ ರಕ್ತದಾನ ಮಾಡಿದ ಶ್ವಾನ ಎದ್ದು ನಿಂತಿದೆ. ಅದು ಎಲ್ಲರೀತಿಯಿಂದಲೂ ಆರೋಗ್ಯವಾಗಿದೆ ಎಂದಿದ್ದಾರೆ. ಇತರರ ಜೀವ ಉಳಿಸಲು ರಕ್ತದಾನ ಮಾಡಬೇಕು ಎಂದು ಈ ಮೂಕ ಜೀವಿ ಮಾನವರಿಗೆ ಸ್ಫೂರ್ತಿ ನೀಡುತ್ತಿದೆ ಎಂದು ಪಶುವೈದ್ಯ ವೈದ್ಯರು ಹೇಳಿದ್ದಾರೆ. (ಎಸ್.ಎಚ್)

 

Leave a Reply

comments

Related Articles

error: