ಮೈಸೂರು

ಮಹಿಳೆಯ ಕತ್ತು ಸೀಳಿ ಕೊಲೆ : ಗಾಯತ್ರೀಪುರಂನಲ್ಲಿ ನಡೆದ ಘಟನೆ ; ಪತಿಯ ಕೃತ್ಯ ಶಂಕೆ

ಮೈಸೂರು,ಜು.25:- ಗಾಯತ್ರಿಪುರಂನ ಮನೆಯೊಂದರಲ್ಲಿ ಮಹಿಳೆಯೋರ್ವರನ್ನು ಕತ್ತು ಸೀಳಿ   ಗಾಯತ್ರಿಪುರಂನ ಮನೆಯೊಂದರಲ್ಲಿ ನಡೆದಿದೆ.

ಗಾಯತ್ರಿಪುರಂ 2 ನೇ ಹಂತ, 2ನೇ ಕ್ರಾಸ್ ನಲ್ಲಿ ವಾಸವಿದ್ದ ರೇಷ್ಮಾ(25) ಕೊಲೆಯಾದ ಮಹಿಳೆಯಾಗಿದ್ದು, ಪತಿ ನದೀಮ್ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ ಕ್ಯಾತಮಾರನಹಳ್ಳಿಯಲ್ಲಿ ವಾಸವಿದ್ದ ಈ ಕುಟುಂಬ 3  ದಿನಗಳ ಹಿಂದಷ್ಟೇ ಮನೆ ಖಾಲಿ ಮಾಡಿ ಗಾಯತ್ರಿಪುರಂನ ಮೆಯೊಂದನ್ನು ಭೋಗ್ಯಕ್ಕೆ ಪಡೆದಿದ್ದರು ಎನ್ನಲಾಗಿದೆ. ಪ್ರತಿ ನಿತ್ಯ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ನಿನ್ನೆ ರಾತ್ರಿಯೂ ಜಗಳ ನಡೆದಿದ್ದು, ಗಂಡ ಮನೆಯಿಂದ ಹೊರ ಹೋದವನು ರಾತ್ರಿ ಪೂರ ಮನೆಗೆ ಮರಳಿಲ್ಲ ಎನ್ನಲಾಗಿದೆ.

ಇಂದು ಬೆಳಿಗ್ಗೆ ಮನೆಗೆ ಆಗಮಿಸಿದ ಗಂಡ ಪತ್ನಿಯನ್ನು ಕೊಲೆಗೈದು ಪರಾರಿಯಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.  ಇವರಿಗೆ ಇನ್ನೂ ವರ್ಷ ಪೂರೈಸದ  ಮಗು ಕೂಡ ಇದೆ. ಸ್ಥಳಕ್ಕೆ ನಜರ್ ಬಾದ್ ಪೊಲೀಸರು ಮತ್ತು ಡಿಸಿಪಿ ಬಿ.ಟಿ.ಕವಿತಾ  ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: