ಮೈಸೂರು

ಅನಕ್ಷರಸ್ಥರಲ್ಲಿ ಹಣದ ಅಪಮೌಲ್ಯದ ಮಾಹಿತಿ ನೀಡುವುದು ಮುಖ್ಯ : ಭಾಗ್ಯವಾನ್ ಎಸ್.ಮುದಿಗೌಡರ್

ಮೈಸೂರು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಮೈಸೂರು ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಅಪ್ಲೋಡಿಂಗ್ ಎಐಎಸ್ ಎಚ್ ಇ ಡೇಟಾ ಟು ಆಲ್ ಇಂಡಿಯಾ ಸರ್ವೇ ಆನ್ ಹೈಯರ್ ಎಜ್ಯುಕೇಶನ್ ಪೋರ್ಟಲ್ ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.

ವಿಚಾರ ಸಂಕಿರಣವನ್ನು ದೀಪ ಬೆಳಗಿಸುವ ಮೂಲಕ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಾಜಣ್ಣ ಉದ್ಘಾಟಿಸಿದರು.  ವಿಶೇಷಾಧಿಕಾರಿ ಭಾಗ್ಯವಾನ್ ಎಸ್ ಮುದಿಗೌಡರ್ ಮಾತನಾಡಿ ದತ್ತಾಂಶ ಮತ್ತು ಹಣದ ಅಪಮೌಲ್ಯ ಹಾಗೂ ಪಿಜಿ  ಶಿಕ್ಷಣದ ಕುರಿತು ಮಾಹಿತಿ ನೀಡಿದರು. 2011 ರಲ್ಲಿ 6 ಲಕ್ಷ ವಿದ್ಯಾರ್ಥಿಗಳಿದ್ದರು. ಇದೀಗ 18.6 ಲಕ್ಷ ವಿದ್ಯಾರ್ಥಿಗಳು ಇದ್ದಾರೆ. ಆದರೆ ಇವರುಗಳಿಗೆ ನೀಡುತ್ತಿರುವ ಸರ್ಕಾರದ ಅನುದಾನ ಸಾಕಾಗುತ್ತಿಲ್ಲ. ಈ‌ ಕಾರ್ಯಕ್ರಮದ ಮೂಲ ಉದ್ದೇಶ ದತ್ತಾಂಶದ ಬಗ್ಗೆ ಸಾಮಾನ್ಯವಾಗಿ ಅರಿವು ಮೂಡಿಸುವುದಾಗಿದೆ ಎಂದರು. 2015ರ ನಂತರ ಸರ್ಕಾರದ ಕಾಯ್ದೆಯೇ ಜಾರಿಗೆ ಬಂದಿದೆ. ಸರ್ಕಾರಿ ಸಂಸ್ಥೆಯಾಗಲಿ ಅಥವಾ ಖಾಸಗಿ ಸಂಸ್ಥೆಗಳಾಗಲಿ ಮಾಹಿತಿಯ ದತ್ತಾಂಶಗಳನ್ನು ಸರ್ಕಾರಕ್ಕೆ ಅಪಲೋಡ್ ಮಾಡಬೇಕು. ಯಾವ ಸಂಸ್ಥೆ ಮಾಹಿತಿಗಳನ್ನು ಅಪಲೋಡ್ ಮಾಡೋದಿಲ್ಲವೋ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಶಿಕ್ಷಕರ ಮಾಹಿತಿ ವಿವರ ಕೂಡ ಶಿಕ್ಷಕರ ಮಾಹಿತಿ ಕೇಂದ್ರ ನೀಡಲಿದೆ. ವಿದ್ಯಾರ್ಥಿಗಳ ಮೂಲಕ ಅನಕ್ಷರಸ್ಥರಲ್ಲಿ ಹಣದ ಅಪಮೌಲ್ಯದ ಬಗ್ಗೆ ಮಾಹಿತಿ ನೀಡುವುದು‌ ಬಹಳ‌ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಪಿಎಂಇಬಿ ನಿರ್ದೆಶಕ ಪ್ರೊ.ಲಿಂಗರಾಜ ಗಾಂಧಿ, ಪ್ರಭಾರ ಕುಲಪತಿ ಪ್ರೊ.ಯಶವಂತ ಡೋಂಗ್ರೆ, ನೋಡಲ್ ಅಧಿಕಾರಿ ಡಾ.ವೀಣಾ ಮಠದ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: