ಮೈಸೂರು

ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪ್ಟೊಲಾಜಿ ಕ್ಷೇತ್ರದ ಬೆಳವಣಿಗೆ ಕುರಿತು ಸಮಾವೇಶ

ಜೆಎಸ್ ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪ್ಟೊಲೊಜಿ ವಿಭಾಗ, ಗ್ಯಾಸ್ಟ್ರೊ ವೇದಿಕೆ ಮತ್ತು ಐಎಸ್ ಜಿ ವತಿಯಿಂದ ಸೆ.24 ಮತ್ತು 25 ರಂದು ಜೆ ಎಸ್ ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪ್ಟೊಲೊಜಿ ಕ್ಷೇತ್ರದ ಬೆಳವಣಿಗೆಗಳ ಕುರಿತು ಸಮಾವೇಶವನ್ನು ಏರ್ಪಡಿಸಲಾಗಿದೆ.

ಈ ಸಮಾವೇಶದಲ್ಲಿ ಭಾರತದ ಪ್ರಸಿದ್ಧ ಆಸ್ಪತ್ರೆಗಳ ನುರಿತ ತಜ್ಞ ವೈದ್ಯರು ಉದರ ಶಾಸ್ತ್ರ, ಲಿವರ್ ಮತ್ತು ಮೇದೋಜಿರಕಾಂಗ ಸಂಬಂಧಿತ ಸಮಸ್ಯೆಗಳು ಮತ್ತು ಬೆಳವಣಿಗೆಗಳ ಬಗ್ಗೆ ಚರ್ಚಿಸಲಿದ್ಧಾರೆ ಇದು ಗ್ಯಾಸ್ಟ್ರೋಯಿಂಟರೊಲೊಜಿಸ್ಟ್ ವೈದ್ಯರಿಗೆ, ಶಸ್ತ್ರಚಿಕಿತ್ಸಕರಿಗೆ ಮತ್ತು ವೈದ್ಯಶಾಸ್ತ್ರ ವಿಭಾಗದ ವೈದ್ಯರಿಗೆ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಸದಾವಕಾಶವಾಗಿದೆ.

ಅಲ್ಲದೇ ಲಿವರ್ ಕಸಿ, ಉದರ ಶಾಸ್ತ್ರ, ಶಸ್ತ್ರಚಿಕಿತ್ಸೆ ಮತ್ತು ಕ್ಷಕಿರಣ ಕ್ಷೇತ್ರಗಳಲ್ಲಿ ಇತ್ತೀಚಿನ ಬೆಳವಣಿಗೆಗಳ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ. ಡಿಎಮ್/ಡಿ.ಎನ್.ಬಿ, ತರಬೇತಿ, ಡಿಎಮ್/ಎಂ.ಸಿ.ಹೆಚ್. ಆಕಾಂಕ್ಷಿಗಳು ಮತ್ತು ಸ್ನಾತಕೋತ್ತರ ಪದವೀಧರ ವೈದ್ಯರು, ಹಿರಿಯ ಗೌರವಾನ್ವಿತ ವೃತ್ತಿಪರ ರಾಷ್ಟ್ರೀಯ ಉಪನ್ಯಾಸಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ರಾಜ್ಯಾದ್ಯಂತ ಸುಮಾರು 300 ವಿವಿಧ ಕ್ಷೇತ್ರದ ವಿಶೇಷ ವೈದ್ಯಕೀಯ ಪ್ರತಿನಿಧಿಗಳು ಗ್ಯಾಸ್ಟ್ರೊಕಾನ್ 2016ಕ್ಕೆ ಭಾಗವಹಿಸುತ್ತಾರೆ ಎಂದು ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಗ್ಯಾಸ್ಟ್ರೋ ಎಂಟರಾಲಜಿ ಮತ್ತು ಹೆಪ್ಟೊಲೊಜಿ ವಿಭಾಗದ ಸಂಘಟನಾ ಕಾರ್ಯದರ್ಶಿ ಡಾ. ಹೆಚ್.ಪಿ.ನಂದೀಶ್ ತಿಳಿಸಿದರು.

ಮೈಸೂರಿನ ಬೋಗಾದಿಯಲ್ಲಿರುವ ಎಂ.ಕೆ.ಎನ್ ಅಕಾಡೆಮಿಯ ವತಿಯಿಂದ ಅ.3 ರಿಂದ ಪಿ.ಡಿ.ಓ., ಪಿ.ಎಸ್.ಐ., ಐ.ಬಿ.ಪಿ.ಎಸ್. ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ 9071191510 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Tags

Related Articles

error: