ಪ್ರಮುಖ ಸುದ್ದಿಮೈಸೂರು

ದಿ.28ರಂದು ‘ಸುಳಿವಾತ್ಮ ಎನ್ನೊಳಗೆ’ ನಾಟಕ ಪ್ರದರ್ಶನ

ಮೈಸೂರು. ಜು.26 : ಕಳೆದ ಐದು ದಶಕಗಳಿಂದ ಮೌಲ್ಯಯುತ ನಾಟಕ ಪ್ರದರ್ಶನ ನೀಡುತ್ತಿರುವ ಕದಂಬ ರಂಗ ವೇದಿಕೆ ವತಿಯಿಂದ   “ಸುಳಿವಾತ್ಮ ಎನ್ನೊಳಗೆ” ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶರಣ ಸಂಸ್ಕೃತಿ ಅನಾವರಣ ನಿಟ್ಟಿನಲ್ಲಿ ಪ್ರೊ.ಹೆಚ್.ಎಸ್.ಉಮೇಶ್ ನಿರ್ದೇಶನದಲ್ಲಿ ನಾಟಕ ಮೂಡಿದ್ದು.12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಮೌಲ್ಯಧಾರಿತವಾಗಿ ಸಂಪೂರ್ಣ ಕಥೆ ಮೂಡಿದ್ದರು, ನಾಟಕದಲ್ಲಿ ಎಲ್ಲಿಯೂ ಅವರ ಪಾತ್ರ ರಂಗದ ಮೇಲೇ ಮೂಡುವುದಿಲ್ಲ ಎಂದು ತಿಳಿಸಿದರು.

ಅವರು ಸೃಷ್ಟಿಸುವ ವಿಚಾರಗಳು, ಸಾಮಾಜಿಕ ಪರಿಣಾಮಗಳು ನಾಟಕದ ಬೆಳವಣಿಗೆಗೆ ಮುಖ್ಯ ಅಂಶವಾಗಿದೆ. ಹವ್ಯಾಸಿ ರಂಗ ಕಲಾವಿದರಾದ ಎಸ್.ಧನಂಜಯ್, ಡಾ.ನಾಗರಾಜ್. ಬಿ.ಜಿ.ಕೆರೆ. ಯು.ಎಸ್.ರಾಮಣ್ಣ, ನಾಗಭೂಷಣ ದೀಪಕ್, ವಿನೋದ ಕುಮಾರ್, ಸಿ.ಎಫ್.ಟಿ.ಆರ್.ಐ ನಾಗೇಂದ್ರ ಸೇರಿದಂತೆ ಹಲವು ಕಲಾವಿದರು ಪಾತ್ರ ನಿರ್ವಹಿಸಿರುವರು ಎಂದು ಹೇಳಿದರು.

ದಿ.28 ರಂದು ರಂಗಾಯಣದ ಕಿರು ರಂಗಮಂದಿರದಲ್ಲಿ ಸಂಜೆ 6.30,ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ರಮೇಶ್ ಬಾಬು, ತಿಪ್ಪಣ್ಣ, ಸುಬ್ಬನರಸಿಂಹ, ಭವ್ಯ ಮೊದಲಾದವರು ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ: ಕೆ.ಎಂ.ಆರ್)

Leave a Reply

comments

Related Articles

error: