ಮನರಂಜನೆ

ಸಖತ್ ಸದ್ದು ಮಾಡುತ್ತಿದೆ `ಮಿಷನ್ ಮಂಗಳ್’ ಚಿತ್ರದ ಮೊದಲ ಹಾಡು

ಮುಂಬೈ,ಜು.26-ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ `ಮಿಷನ್ ಮಂಗಳ್’ ಚಿತ್ರದ ಮೊದಲ ಹಾಡು ಬಿಡುಗಡೆಗೊಂಡಿದ್ದು, ಯೂ ಟ್ಯೂಬ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ.

`ಮಿಷನ್ ಮಂಗಳ್‌ʼ ಚಿತ್ರದ ‌ʼದಿಲ್ ಮೇನ್ ಮಾರ್ಸ್ ಹೈʼ ಹಾಡು ಬಿಡುಗಡೆಗೊಂಡಿದೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಹಾಡನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಗ್ಗೆ ಅಕ್ಷಯ್ ಕುಮಾರ್ ಬರೆದುಕೊಂಡಿದ್ದು, ಒಂದು ತಂಡವಾಗಿ ಕೆಲಸ ಮಾಡಿದರೆ, ಕನಸಿನ ಯೋಜನೆ ಕೈಗೊಡಲಿದೆ ಎಂದು ಹೇಳಿದ್ದಾರೆ.

ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಕನ್ನಡದ ಹಿರಿಯ ಕಲಾವಿದ ದತ್ತಣ್ಣ, ವಿದ್ಯಾ ಬಾಲನ್, ಸೋನಾಕ್ಷಿ ಸಿನ್ಹಾ, ತಾಪ್ಸಿ ಪನ್ನು, ನಿತ್ಯಾ ಮೆನನ್, ಶರ್ಮಾನ್ ಜೋಶಿ ಅಭಿನಯಿಸಿದ್ದಾರೆ.

ಇದು ಭಾರತ ಮಂಗಳನ ಅಂಗಳಕ್ಕೆ ಹೋಗುವ ಕನಸಿನ ರೋಚಕ ಅನುಭವವನ್ನು ಆಧರಿಸಿರುವ ಚಿತ್ರವಾಗಿದೆ. .15ರಂದು ತೆರೆಕಾಣಲಿದೆ. (ಎಂ.ಎನ್)

Leave a Reply

comments

Related Articles

error: