ಮನರಂಜನೆ

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಸಾಹೋ’ ಆಕ್ಷನ್ ಪೋಸ್ಟರ್ ರಿಲೀಸ್

ದೇಶ(ನವದೆಹಲಿ)ಜು.26:- ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಮತ್ತು ಬಾಲಿವುಡ್ ನಟಿ  ಶ್ರದ್ಧಾ ಕಪೂರ್ ಅಭಿನಯದ ಬಹುನಿರೀಕ್ಷಿತ ಚಿತ್ರ  ‘ಸಾಹೋ’ಗೆ ಬಿಡುಗಡೆಗೆ ಕೇವಲ ಒಂದು ತಿಂಗಳು ಬಾಕಿ ಇದೆ.

ಚಿತ್ರ ಆಗಸ್ಟ್ 15 ರಂದು ಬಿಡುಗಡೆಯಾಗಬೇಕಿತ್ತು, ಆದರೆ ಈಗ ಅದನ್ನು ಆಗಸ್ಟ್ 30 ಕ್ಕೆ ತೆರೆಯ ಮೇಲೆ ತರಲು ನಿರ್ಧರಿಸಲಾಗಿದೆ.  ಈಗ ಈ ಹೊಸ ಬಿಡುಗಡೆಯ ದಿನಾಂಕದೊಂದಿಗೆ, ಭಾರತೀಯ ಚಿತ್ರರಂಗದ ‘ಬಾಹುಬಲಿ’ ಪ್ರಭಾಸ್ ‘ಸಾಹೋ’ ನ ಹೊಸ ಆಕ್ಷನ್ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

‘ಸಾಹೋ’ ಚಿತ್ರದ ಈ ಹೊಸ ಆ್ಯಕ್ಷನ್ ಪೋಸ್ಟರ್ ನಲ್ಲಿ  ಶ್ರದ್ಧಾ ಕಪೂರ್ ಅವರೊಂದಿಗೆ ಪ್ರಭಾಸ್ ಕೈನಲ್ಲಿ ಪಿಸ್ತೂಲ್ ಹಿಡಿದು ವೈರಿಗಳನ್ನು ಸದೆ ಬಡಿಯುವಂತೆ ಕಾಣಿಸಿಕೊಂಡಿದ್ದು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ  ಹಂಚಿಕೊಳ್ಳುವ ಮೂಲಕ ಪ್ರಭಾಸ್ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.   ಪೋಸ್ಟರ್‌ನಲ್ಲಿ, ಪ್ರಭಾಸ್ ಮತ್ತು ಶ್ರದ್ಧಾ ಕಪೂರ್  ಶತ್ರುಗಳ ಮೇಲೆ ಪಿಸ್ತೂಲ್ ನಿಂದ ಗುಟುಂಗಳನ್ನು ಸಿಡಿಸುತ್ತಿದ್ದಾರೆ.   ಈ ಪೋಸ್ಟರ್ ನೋಡಿದ ಎಲ್ಲರೂ ಚಿತ್ರವನ್ನು ನೋಡಲು ಉತ್ಸುಕರಾಗುವುದಂತೂ ಗ್ಯಾರಂಟಿ.

ಹ್ಯಾಂಡ್ ಸಮ್ ನಟ ಪ್ರಭಾಸ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ    ಹಾಯ್ ಡಾರ್ಲಿಂಗ್ಸ್! ಈ ಆಕ್ಷನ್ ಪೋಸ್ಟರ್ ನಿಮಗೆ ಇಷ್ಟವಾಯಿತೆಂದು ಭಾವಿಸುತ್ತೇನೆ  # ಸಾಹೋ ಆಗಸ್ಟ್ 30 ರಂದು ತೆರೆಗೆ ಬರಲಿದೆ!” ಎಂಬ ಶೀರ್ಷಿಕೆ ಬರೆದು  ಪೋಸ್ಟರ್ ಪೋಸ್ಟ್ ಮಾಡಿದ್ದಾರೆ. ಪ್ರಭಾಸ್ ತನ್ನ ಅಧಿಕೃತ ಖಾತೆಯಲ್ಲಿ  ಚಿತ್ರ  ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿದ್ದಾರೆ.

‘ಸಾಹೋ’ದಲ್ಲಿ  ಶ್ರದ್ಧಾ ಕಪೂರ್  ಓರ್ವ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಅವರು “ನಾನು ಮೊದಲ ಬಾರಿಗೆ ಪೊಲೀಸ್ ಪಾತ್ರವನ್ನು ನಿರ್ವಹಿಸಲು ತುಂಬಾ ಉತ್ಸುಕಳಾಗಿದ್ದೇನೆ, ಇದು ವಿಶೇಷ ಅನುಭವವಾಗಿದೆ.  ಇದು ಒಂದು ಗೌರವವಾಗಿದೆ. ನನಗೆ ದೇಶವನ್ನು ಪ್ರತಿನಿಧಿಸುವ ಪಾತ್ರ ದೊರಕಿದೆ’ ಎಂದಿದ್ದಾರೆ. ಚಿತ್ರವು ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.  (ಎಸ್.ಎಚ್)

Leave a Reply

comments

Related Articles

error: