ಮೈಸೂರು

ಜೆಎಸ್‍ಎಸ್ ಕಾಲೇಜಿನಲ್ಲಿ ಕಾರ್ಗಿಲ್  ದಿವಸ್ ಆಚರಣೆ

ಮೈಸೂರು,ಜು.26:- ಮೈಸೂರಿನ ಬಿ.ಎನ್. ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕಾರ್ಗಿಲ್ ದಿವಸ್ ಕಾರ್ಯಕ್ರಮವನ್ನು  ಇಂದು ಆಚರಿಸಲಾಯಿತು.

ಎನ್‍ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ಪಿ.ಟಿ. ರಾಜೀವ್ ರವರು ಮಾತನಾಡಿ  “ಕಾರ್ಗಿಲ್ ಯುದ್ಧವು ಭಾರತದ ಶಕ್ತಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಗೊಳ್ಳುವಂತೆ ಮಾಡಿತು. ಭಾರತೀಯ ಸೈನಿಕರ ಸಾಮರ್ಥ್ಯ ಮತ್ತೊಮ್ಮೆ ಜಗತ್ತಿಗೆ ತಿಳಿಯುವಂತಾಯಿತು”ಎಂದರು

14 ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ಜಗರಾಜ್ ಸಿಂಗ್ ಮಾತನಾಡಿ “ಭಾರತದ ಪ್ರತಿಯೊಬ್ಬ ನಾಗರೀಕನ ಬೆಂಬಲ ಮತ್ತು ಸಹಾಯವು ಯುದ್ಧದ ಯಶಸ್ಸಿನಲ್ಲಿ ಸೇರ್ಪಡೆಯಾಗಿದೆ. ಸೈನಿಕರಿಗೆ ಅವರು ಕೊಟ್ಟ ಪ್ರೋತ್ಸಾಹ ಮತ್ತು ಬೆಂಬಲದಿಂದ ನಮ್ಮ ಸೈನಿಕರು ಯಾವುದೇ ಎಡರು ತೊಡರು ಬಂದರೂ ಲೆಕ್ಕಿಸದೆ ಹೋರಾಡಿ ಜಯವನ್ನು ತಂದಿತ್ತರು” ಎಂದು ಹೇಳಿದರು.

14 ಕರ್ನಾಟಕ ಬೆಟಾಲಿಯನ್ ಲೆಫ್ಟಿನೆಂಟ್ ಕರ್ನಲ್ ರೋಸನ್ ಅಪ್ಪಣ್ಣ ರವರು ಮಾತನಾಡಿ “ರಾಷ್ಟ್ರವನ್ನು ಪ್ರೀತಿಸುವವರೂ ಸತ್ ಮಾರ್ಗದಲ್ಲಿ ಸಾಗಿದಾಗ ಜಯ ಲಭಿಸುತ್ತದೆ ಎಂಬುದಕ್ಕೆ ಕಾರ್ಗಿಲ್ ವಿಜಯವೇ ಉದಾಹರಣೆಯಾಗಿದೆ. ಧರ್ಮಕ್ಕಾಗಿ, ರಾಷ್ಟ್ರಕ್ಕಾಗಿ  ಕೆಟ್ಟಮಾರ್ಗವನ್ನು ಅನುಸರಿಸಿದರೆ ಸೋಲು ತಪ್ಪಿದ್ದಲ್ಲ ಎಂಬುದನ್ನು ಕಾರ್ಗಿಲ್ ಯುದ್ಧ ಸಾರುತ್ತದೆ” ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದ ಲೆಫ್ಟಿನೆಂಟ್ ಡಾ. ಎಲ್. ವಿನಯ್‍ ಕುಮಾರ್ ಅವರು “ಕಾರ್ಗಿಲ್ ಯುದ್ಧವು ನಮ್ಮ ದೇಶದ ಭದ್ರತೆ, ಸ್ವಾಭಿಮಾನ ಮತ್ತು ಸ್ಥೈರ್ಯದ ಸಂಕೇತವಾಗಿದೆ. ಸುಮಾರು 60 ದಿನಗಳ ಕಾಲ ನಡೆದ ಯುದ್ಧದಲ್ಲಿ ಭಾರತ ವಿಜಯಿಶಾಲಿಯಾಯಿತು. ಈ ಗೆಲುವಿನಲ್ಲಿ ನಮ್ಮ ಸೈನಿಕರ ತ್ಯಾಗ, ಬಲಿದಾನವಿದೆ. ಅವರನ್ನು ಸ್ಮರಿಸಿಕೊಳ್ಳುವುದರೊಂದಿಗೆ ಈ ವಿಜಯದ ಆಚರಣೆಯು ನಮ್ಮೆಲ್ಲರ ಭಾವೈಕ್ಯದ ಸಂಕೇತವಾಗಿದೆ” ಎಂದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕರಾದ ಪ್ರೊ. ಬಿ.ವಿ. ಸಾಂಬಶಿವಯ್ಯನವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ. ಮಹದೇವಪ್ಪನವರು ವಂದಿಸಿದರು. ಕೆಡೆಟ್   ಎಂ. ನಿವೇದಿತಾ ಪ್ರಾರ್ಥಿಸಿದರು. ಅಧ್ಯಾಪಕರು, ಎನ್‍ಸಿಸಿವಿದ್ಯಾರ್ಥಿಗಳು, ಎನ್‍ಸಿಸಿ ಬೆಟಾಲಿಯನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: