ಪ್ರಮುಖ ಸುದ್ದಿ

ಬ್ಯಾಂಕ್ ಆಫ್ ಬರೋಡದಿಂದ ಶಾಲಾ ವಿದ್ಯಾರ್ಥಿಗಳಿಗೆ ಕೊಡುಗೆ

ರಾಜ್ಯ(ಮಡಿಕೇರಿ) ಜು.27 :- ಮರಗೋಡಿನ ಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡ (ವಿಜಯ ಬ್ಯಾಂಕ್) ವತಿಯಿಂದ ಊಟದ ತಟ್ಟೆಗಳನ್ನು ಕೊಡುಗೆಯಾಗಿ ನೀಡಲಾಯಿತು. ಬ್ಯಾಂಕ್ ನ ಮರಗೋಡು ಶಾಖೆಯ ಸೀನಿಯರ್ ವ್ಯವಸ್ಥಾಪಕರಾದ ವಿ.ಪ್ರಕಾಶ್ ಅವರು ಶಾಲೆಯ 150 ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಸುಮಾರು 17000 ರೂಪಾಯಿ ಮೌಲ್ಯದ ಊಟದ ತಟ್ಟೆಗಳನ್ನು ಮುಖ್ಯಶಿಕ್ಷಕರಾದ ಪಿ.ಎಸ್ ರವಿಕೃಷ್ಣ ಅವರಿಗೆ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು ಗುಜರಾತಿನ ಬರೋಡದ ಮಹಾರಾಜರಾದ ಮೂರನೇ ಸಯ್ಯಾಜಿರಾವ್ ಗಾಯಕವಾಡ್ ಇವರು 1908 ರ ಜುಲೈ 20 ರಂದು ಬ್ಯಾಂಕ್ ಆಫ್ ಬರೋಡವನ್ನು ಸ್ಥಾಪಿಸಿದರು.ಆದುದರಿಂದ ಸಂಸ್ಥಾಪಕರ ದಿನವನ್ನು ಸಮಾಜಮುಖಿ ಕೆಲಸಗಳ ಮೂಲಕ ಆಚರಿಸಲಾಗುತ್ತಿದೆ, ವಿದ್ಯಾರ್ಥಿಗಳು ಸಮಾಜದಿಂದ ಲಭ್ಯವಾಗುವ ಸೌಲಭ್ಯಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕ್ ನ ಸಿಬ್ಬಂದಿಗಳಾದ ಕೆ.ಕೆ ರವಿ, ಬಿ.ಸಂತೋಷ್, ಸಿ.ವಿ.ಆರ್.ಪಣಿಕ್ಕರ್, ಬಿ.ಎಚ್ ನಾರಾಯಣ್ ಶಾಲಾ ಶಿಕ್ಷಕ ವರ್ಗದವರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: