ಮೈಸೂರು

ಹೆಚ್ಚುವರಿ ವಿಶೇಷ ವೇತನ ಬಡ್ತಿಗಾಗಿ ಒತ್ತಾಯ

ರಾಜ್ಯದ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ವೃಂದದ ಶಿಕ್ಷಕರಿಗೆ ಏಪ್ರಿಲ್ 15ರ ಆದೇಶದ ಪ್ರಕಾರ ಒಂದು ಹೆಚ್ಚುವರಿ ವಿಶೇಷ ವೇತನ ಬಡ್ತಿಯನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘವು ಒತ್ತಾಯಿಸಿದೆ.

ದೈಹಿಕ ಶಿಕ್ಷಕರು, ವೃತ್ತಿ ಶಿಕ್ಷಕರು, ಚಿತ್ರಕಲಾ ಶಿಕ್ಷಕರು, ಸಂಗೀತ, ನಾಟಕ ಹಾಗೂ ನೃತ್ಯ ಶಿಕ್ಷಕರು ಒಂದು ವಿಶೇಷ ವಾರ್ಷಿಕ ವೇತನ ಬಡ್ತಿಯಿಂದ ವಂಚಿತರಾಗಿದ್ದಾರೆ. ಪ್ರೌಢಶಾಲೆಯ ಎಲ್ಲಾ ವೃಂದದ ಶಿಕ್ಷಕರಿಗೆ ಒಂದು ವಿಶೇಷ ವಾರ್ಷಿಕ ವೇತನ ಬಡ್ತಿ ನೀಡಬೇಕೆಂದು ಹಾಗೂ ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ಅಳವಡಿಸಲು ಕೂಡಲೇ ಮರು ಆದೇಶ ನೀಡಬೇಕೆಂದು ಸಂಘವು ಸಾರ್ವಜನಿಕ ಶಿಕ್ಷಣ ಇಲಾಖಾ ಆಯುಕ್ತರಿಗೆ ಆಗ್ರಹಿಸುತ್ತದೆ.

Leave a Reply

comments

Related Articles

error: