ಮೈಸೂರು

ಜೀನಿಯಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿ.ಎ, ಸಿ.ಎಸ್. ಮತ್ತು ಸಿ.ಎಂ.ಎ ಕೋರ್ಸ್‍ಗಳ ಕಾರ್ಯಕ್ರಮ ಉದ್ಘಾಟನೆ

ಮೈಸೂರು,ಜು.27:- ಜೀನಿಯಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಹೊಸದಾಗಿ ಆರಂಭಿಸಿರುವ ಸಿ.ಎ., ಸಿ.ಎಸ್. ಮತ್ತು ಸಿ.ಎಂ.ಎ ಕೋರ್ಸ್‍ಗಳ ಕಾರ್ಯಕ್ರಮಗಳನ್ನು ಚಾಲೇಂಜರ್ಸ್ ಆಕಾಡೆಮಿಯ ನಿರ್ದೇಶಕರು ಮತ್ತು ಪರಿವರ್ತನ ಕಾಲೇಜಿನ ಪ್ರಾಂಶುಪಾಲರಾದ  ಬ್ರಿಜೇಶ್ ಪಟೇಲ್ ಎನ್. ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳಿಗೆ ಈ ಕೋರ್ಸ್‍ಗಳ ಬಗ್ಗೆ ಮಾಹಿತಿಯ ಕೊರತೆ ಇದ್ದು, ಪದವಿ ಮುಗಿಸಿದ ನಂತರ ಮುಂದೇನು ಮಾಡುವುದು ಎಂಬ ಆತಂಕದಲ್ಲಿರುತ್ತಾರೆ. ಪದವಿ ನಂತರ ಎಂ.ಕಾಂ. ಹಾಗೂ ಎಂ.ಬಿ.ಎ. ಪದವಿಗಳಿಗೆಂದು ಲಕ್ಷಾಂತರ ರೂಪಾಯಿಗಳನ್ನು ವೆಚ್ಚಮಾಡುವುದರ ಬದಲಾಗಿ ಇಂತಹ ವೃತ್ತಿಪರ ಕೋರ್ಸ್‍ಗಳನ್ನು ಕಡಿಮೆ ವೆಚ್ಚದಲ್ಲಿ ವ್ಯಾಸಂಗ ಮಾಡಬಹುದಾಗಿದ್ದು, ಇದರಿಂದ ಉದ್ಯೋಗಾವಕಾಶಗಳು ಹೇರಳವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ತಮ್ಮ ಪದವಿಯ ಜೊತೆಜೊತೆಗೆ ಈ ರೀತಿಯ ಕೋರ್ಸ್‍ಗಳ ತರಬೇತಿಯನ್ನು ಪಡೆದುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹದು. ಇದರ ಬಗ್ಗೆ ಯಾವುದೇ ಆತಂಕ ಬೇಡ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ಕಾಲೇಜಿನ ಪ್ರಾಂಶುಪಾಲರಾದ   ಎನ್. ಸುರೇಖ ಪ್ರಭು ಮಾತನಾಡಿ, “ಇಂದು ನಮ್ಮ ಕಾಲೇಜಿನಲ್ಲಿ ಈ ರೀತಿಯ ಕೋರ್ಸ್‍ಗಳ ತರಗತಿಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು, ಉನ್ನತ ದರ್ಜೆಯಲ್ಲಿ ತೇರ್ಗಡೆಹೊಂದಿ, ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡು ನಮ್ಮ ಕಾಲೇಜಿಗೆ ಕೀರ್ತಿ ತರಬೇಕೆಂದು ತಿಳಿಸಿದರು”. ಮುಂದಿನ ದಿನಗಳಲ್ಲಿ ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ತರಬೇತಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದು, ಈ ಸಮಾರಂಭಕ್ಕೆ ಸಾಕ್ಷಿಯಾದರು.  (ಎಸ್.ಎಚ್)

Leave a Reply

comments

Related Articles

error: