ಪ್ರಮುಖ ಸುದ್ದಿ

ಮಳೆ ಮುಂಜಾಗ್ರತೆ : ಮಡಿಕೇರಿಯಲ್ಲಿ ಎನ್‍ಡಿಆರ್‍ಎಫ್ ತಂಡದಿಂದ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ

ರಾಜ್ಯ(ಮಡಿಕೇರಿ) ಜು.28 : – ಕೊಡಗಿಗೆ ನಿರೀಕ್ಷಿತ ಮಳೆ ಬಾರದಿದ್ದರೂ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಮುಂದುವರೆಸಿದೆ. ಆಂಧ್ರಪ್ರದೇಶದ ಗುಂಟೂರಿನ ಬೆಟಾಲಿಯನ್-10 ಎನ್‍ಡಿಆರ್‍ಎಫ್ ತಂಡ ಕೊಡಗಿನಲ್ಲಿ ಬೀಡು ಬಿಟ್ಟಿದ್ದು, ಅಣಕು ಕಾರ್ಯಾಚರಣೆಯಲ್ಲಿ ತೊಡಗಿದೆ.
ಮಡಿಕೇರಿಯ ಸಂತ ಮೈಕಲರ ಶಾಲಾ ಸಭಾಂಗಣದಲ್ಲಿ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್‍ನ ಎನ್‍ಸಿಸಿ ವಿದ್ಯಾರ್ಥಿಗಳು ಹಾಗೂ ಸಂತ ಮೈಕಲರ ಶಾಲಾ ವಿದ್ಯಾರ್ಥಿಗಳಿಗೆ ಅಣಕು ಕಾರ್ಯಾಚರಣೆ ನಡೆಯಿತು. ಹವಾಲ್ದಾರ್ ದೊಡ್ಡ ಬಸಪ್ಪ ನೇತೃತ್ವದಲ್ಲಿ ಟೀಮ್ ಕಮಾಂಡರ್ ದೀಕ್ಷಿತ್ ಕುಮಾರ್ ಸಮ್ಮುಖದಲ್ಲಿ ಎನ್‍ಡಿಆರ್‍ಎಫ್ ತಂಡ ಅಣಕು ಪ್ರದರ್ಶನ ನಡೆಸಿತು. ವಿಪತ್ತು ಉಂಟಾದರೆ ಯಾವ ರೀತಿ ಕಾರ್ಯ ನಿರ್ವಹಣೆ ಮಾಡಬೇಕು ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಪ್ರಥಮ ಚಿಕಿತ್ಸೆ ಹೇಗೆ ನೀಡಬೇಕು ಎಂಬುವುದನ್ನು ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು.
ಎನ್‍ಸಿಸಿಯ ಸುಬೇದಾರ್ ಮೇಜರ್ ರಾಜೇಶ್, ಎನ್‍ಡಿಆರ್‍ಎಫ್ ನ ಕಾರ್ಯವೈಖರಿ ಹಾಗೂ ಸಾಧನೆಯ ಬಗ್ಗೆ ವಿವರಿಸಿದರು.
ಸಧ್ಯ ಎನ್‍ಡಿಆರ್‍ಎಫ್ ತಂಡ ಮಡಿಕೇರಿಯಲ್ಲಿ ತಂಗಿದ್ದು, ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಪಾಯಕಾರಿ ಪ್ರದೇಶದ ಮೇಲೆ ನಿಗಾ ಇರಿಸಿರುವ ಅಧಿಕಾರಿಗಳು ಪ್ರಾತ್ಯಕ್ಷಿಕೆ ಮೂಲಕ ಜನತೆಗೆ ಧೈರ್ಯ ತುಂಬುತ್ತಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: